News Hour: ಐಷಾರಾಮಿ ವಿಮಾನದಲ್ಲಿ ರಾಜ್ಯದ ಸಿಎಂ ಪ್ರಯಾಣ, ಬರದಿಂದ ರೈತ ನಿತ್ರಾಣ!

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ವಾಪಾಸ್‌ ಬರುವ ವೇಳೆ ಸಿದ್ಧ ಸಿದ್ಧರಾಮಯ್ಯ ಹಾಗೂ ಸಚಿವರಾದ ಜಮೀರ್‌ ಅಹ್ಮದ್‌ ಹಾಗೂ ಕೃಷ್ಣ ಭೈರೇಗೌಡ ಐಷಾರಾಮಿ ಖಾಸಗಿ ವಿಮಾನದಲ್ಲಿ ಪ್ರಯಾಣ ಮಾಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.
 

First Published Dec 22, 2023, 11:13 PM IST | Last Updated Dec 22, 2023, 11:13 PM IST

ಬೆಂಗಳೂರು (ಡಿ.22): ಬರ ಪರಿಹಾರ ಕೇಳುವ ನಿಟ್ಟಿನಲ್ಲಿ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದ ಸಿಎಂ ಸಿದ್ಧರಾಮಯ್ಯ ವಾಪಾಸ್‌ ಬರುವ ವೇಳೆ ಐಷಷಾರಾಮಿ ವಿಮಾನದಲ್ಲಿ ಪ್ರಯಾಣ ಮಾಡಿದ್ದು ಸಾಕಷ್ಟು ಚರ್ಚೆಯಾಗುತ್ತಿದೆ. ಬರದಿಂದ ರಾಜ್ಯದ ರೈತರು ಸಂಕಷ್ಟದಲ್ಲಿರುವ ಸಿಎಂ ಐಷಾರಾಮಿ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ ಎಂದು ಬಿಜೆಪಿ ಟೀಕೆ ಮಾಡಿದೆ.

ಪಿಎಂ ಭೇಟಿ ಬಳಿಕ ಬೆಂಗಳೂರಿಗೆ ಪ್ರೈವೆಟ್ ಜೆಟ್‌ನಲ್ಲಿ ಸಿಎಂ ಸಿದ್ಧರಾಮಯ್ಯ, ಸಚಿವರಾದ ಜಮೀರ್‌ ಅಹ್ಮದ್‌ ಹಾಗೂ ಕೃಷ್ಣಭೈರೇಗೌಡ ವಾಪಸ್‌ ಆಗಿದ್ದಾರೆ. ಈ ರಾಯಲ್‌ ಜರ್ನಿಯ ವಿಡಿಯೋವನ್ನು ಸಚಿವ ಜಮೀರ್‌ ಅಹ್ಮದ್‌ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದೇ ವಿಚಾರವಾಗಿ ಬಿಜೆಪಿ, ಸರ್ಕಾರವನ್ನು ಟೀಕೆ ಮಾಡಿದೆ.

ಐಷಾರಾಮಿ ವಿಮಾನದಲ್ಲಿ ಸಿಎಂ ಸೇರಿ ಹಲವರ ರಾಯಲ್‌ ಜರ್ನಿ, ಜಮೀರ್‌ ಗೆ ಕಂಟಕವಾಯ್ತು ವಿಡಿಯೋ, ಬಿಜೆಪಿ ವ್ಯಂಗ್ಯ

ಸಿದ್ದರಾಮಯ್ಯ ಐಷಾರಾಮಿ ಜರ್ನಿಗೆ ಬಿಜೆಪಿಗರು ಆಕ್ರೋಶ ವ್ಯಕ್ತಪಡಿಸಿದೆ. ಸಮಾಜವಾದಿ ಅಲ್ಲ.. ನೀವು ಮಜಾವಾದಿ ಎಂದು ವಾಗ್ದಾಳಿ ನಡೆಸಿದೆ. ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂದು ಬಿಜೆಪಿ ಟೀಕೆ ಮಾಡಿದೆ. ಇದಕ್ಕೆ ಸಿಎಂ ಸಿದ್ಧು ಮೋದಿ ಯಾವ ಫ್ಲೈಟ್‌ನಲ್ಲಿ ಓಡಾಡುತ್ತಾರೆ..? ಎಂದು ಪ್ರಶ್ನೆ ಮಾಡಿದ್ದಾರೆ.

Video Top Stories