News Hour: ಕೈ ಸರ್ಕಾರದ ಮೊದಲ ಗ್ಯಾರಂಟಿ ಜಾರಿಗೆ ಕ್ಷಣಗಣನೆ!

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರದ ಮೊದಲ ಗ್ಯಾರಂಟಿಗೆ ಕ್ಷಣಗಣನೆ ಆರಂಭವಾಗಿದೆ. ಭಾನುವಾರ ಮುಖ್ಯಮಂತ್ರಿ ಸಿದ್ಧರಾಮತ್ಯ ಶಕ್ತಿಸೌಧ ವಿಧಾನಸೌಧದ ಮುಂಭಾಗದಲ್ಲಿ ಮಹಿಳೆಯರ ಉಚಿತ ಬಸ್‌ ಸೇವೆಗೆ ಚಾಲನೆ ನೀಡಲಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ.10): ನೂತನ ಕಾಂಗ್ರೆಸ್‌ ಸರ್ಕಾರದ ಮೊದಲ ಗ್ಯಾರಂಟಿಗೆ ಕ್ಷಣಗಣನೆ ಆರಂಭವಾಗಿದೆ. ಶಕ್ತಿ ಯೋಜನೆಗೆ ಭಾನುವಾರ ಸಿದ್ಧರಾಮಯ್ಯ ಬಿಎಂಟಿಸಿ ಬಸ್‌ನಲ್ಲಿ ಮೊದಲ ಟಿಕೆಟ್‌ ನೀಡುವ ಮೂಲಕ ಚಾಲನೆ ನೀಡಲಿದ್ದಾರೆ. ನಾಳೆ ಮಧ್ಯಾಹ್ನ 1 ಗಂಟೆಯಿಂದ ಈ ಯೋಜನೆ ಜಾರಿಯಾಗಲಿದೆ. ಅದರೊಂದಿಗೆ ಸರ್ಕಾರ ತನ್ನ ಪಂಚ ಗ್ಯಾರಂಟಿಯ ಮೊದಲ ಗ್ಯಾರಂಟಿಯನ್ನು ಜಾರಿ ಮಾಡಲು ಉತ್ಸುಕವಾಗಿದೆ.

ಈ ನಡುವೆ ಪಂಚ ಗ್ಯಾರಂಟಿ ಘೋಷಣೆ ಮಾಡಿ ಅಧಿಕಾರ ಹಿಡಿದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿಯ ಛಲವಾದಿ ನಾರಾಯಣ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆಯರಿಗೆ ಉಚಿತ ಬಸ್‌ ಸೇವೆ ನೀಡುತ್ತಿದ್ದೀರಿ, ಅಲ್ಲಿಯೇ ಪಕ್ಕದಲ್ಲಿರುವ ಆಟೋ ಚಾಲಕರ ಸಮಸ್ಯೆಯನ್ನೂ ಕೇಳಿ ಎಂದು ಹೇಳಿದ್ದಾರೆ. 

‘ಶಕ್ತಿ ಯೋಜನೆ’ ಜಾರಿ: ನಾಳೆ ಬಸ್ ಹತ್ತಿದ್ರೆ ಸಿಎಂ ಸಿದ್ದು ಕಂಡಕ್ಟರ್

2013 ಹಾಗೂ 2023ರಲ್ಲಿ ವರುಣ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಸಿಎಂ ಗಾದಿಗೆ ಏರಿರುವ ಸಿದ್ಧರಾಮಯ್ಯ, ಶನಿವಾರ ತವರು ಕ್ಷೇತ್ರದಲ್ಲಿ ಕೃತಜ್ಞತಾ ಸಮಾರಂಭ ನಡೆಸಿದರು. ಈ ವೇಳೆ ಅವರಿಗೆ ಜನರು ಭರ್ಜರಿ ಸ್ವಾಗತ ನೀಡಿದ್ದಾರೆ.

Related Video