‘ಶಕ್ತಿ ಯೋಜನೆ’ ಜಾರಿ: ನಾಳೆ ಬಸ್ ಹತ್ತಿದ್ರೆ ಸಿಎಂ ಸಿದ್ದು ಕಂಡಕ್ಟರ್

ನಾಳೆ ರಾಜ್ಯದ ಜನ ಬಹು ನಿರೀಕ್ಷೆಯಿಂದ ಕಾಯ್ತಾ ಇದ್ದ ಮೊದಲ ಗ್ಯಾರಂಟಿ ಶಕ್ತಿ ಯೋಜನೆ ಜಾರಿಯಾಗಲಿದೆ. ಈ ಮೂಲಕ ನಾವು ನುಡಿದಂತೆ ನಡೀತೀವಿ ಎಂಬ ಸಿದ್ದರಾಮಯ್ಯ ತಮ್ಮ ಮಾತನ್ನ ನಿರೂಪಿಸಲಿದ್ದರೆ.

Share this Video
  • FB
  • Linkdin
  • Whatsapp

ನಾಳೆ ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅವರು, ನೂತನವಾಗಿ ಹಾಗೂ ವಿಶಿಷ್ಟವಾಗಿ ಚಾಲನೆ ನೀಡಲಿದ್ದಾರೆ. ಮೆಜೆಸ್ಟಿಕ್‌ನಿಂದ ವಿಧಾನಸೌಧಕ್ಕೆ ತೆರಳುವ ರೂಟ್‌ ನಂ. 43ರಲ್ಲಿ ಕಂಡಕ್ಟರ್‌ ಆಗಿ, ಮಹಿಳೆಯರ ಹತ್ರ ಹೋಗಿ, ಟಿಕೆಟ್ ಟಿಕೆಟ್ ಎಂದು ಕೇಳ್ತಾ, ಉಚಿತ ಟಿಕೆಟ್‌ ವಿತರಿಸಲಿದ್ದಾರೆ. ಈ ರೀತಿ ಮಹಿಳೆಯರಿಗೆ ಟಿಕೆಟ್‌ ನೀಡುವ ಮೂಲಕ ಮಹಿಳೆಯರ ಉಚಿತ ಬಸ್‌ ಪ್ರಯಾಣಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಅಲ್ಲಿಂದ ಮುಂದೆ, ವಿಧಾನಸೌಧದಲ್ಲಿ ನಡೆಯೋ ಅದ್ಧೂರಿ ಕಾರ್ಯಕ್ರಮದಲ್ಲಿ ಯೋಜನೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ. ಚುನಾವಣೆಯಲ್ಲಿ ಗೆದ್ದು ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್, ಗ್ಯಾರಂಟಿಗಳ ಅನುಷ್ಠಾನಕ್ಕೆ ಕಸರತ್ತು ನಡೆಸುತ್ತಿದೆ. ಇದರ ಮೊದಲ ಹಂತವಾಗಿ ಶಕ್ತಿ ಯೋಜನೆಗೆ ಚಾಲನೆ ಸಿಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video