Asianet Suvarna News Asianet Suvarna News

ನಿಮ್ಮನ್ನ ದಮ್ಮಯ್ಯ ಅಂತೀನಿ, ಲಜ್ಜೆಗೆಟ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗಿರಪ್ಪ: ಸಿದ್ದರಾಮಯ್ಯ

Sep 26, 2021, 2:50 PM IST

ಬೆಂಗಳೂರು (ಸೆ. 26): ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಬಡವರ ಹಸಿವು ನೀಗಿಸಿದ್ದು ಕಾಂಗ್ರೆಸ್ ಸರ್ಕಾರ. ಬಿಜೆಪಿ ಸರ್ಕಾರ ದರಿದ್ರ ಸರ್ಕಾರ. ನಿಮ್ಮನ್ನ ದಮ್ಮಯ್ಯ ಅಂತೀನಿ. ಬಿಜೆಪಿ ಸರ್ಕಾರವನ್ನು ಕಿತ್ತೊಗಿರಪ್ಪ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

2 ತಿಂಗಳಾದರೂ ಸರ್ಕಾರಿ ನಿವಾಸ ಬಿಡುತ್ತಿಲ್ಲ ಮಾಜಿ ಸಚಿವರು, ಹೊಸ ಸಚಿವರಿಗೆ ಸಿಕ್ಕಿಲ್ಲ ಮನೆ!

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಬಗ್ಗೆಯೂ ವಾಗ್ದಾಳಿ ನಡೆಸಿದ್ದಾರೆ. ಹಿಟ್ಲರ್ ಥಿಯರಿಯಂತೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವರ್ತಿಸುತ್ತದೆ. ಇದರ ಬಗ್ಗೆ ಹುಷಾರಾಗಿರಿ. ತಾಲಿಬಾನ್ ಅಂದ್ರೆ ಬಿಜೆಪಿ. ಎಚ್ಚರಿಕೆ ಇರಲಿ ಎಂದು ವಾಗ್ದಾಳಿ ನಡೆಸಿದ್ದಾರೆ.