Asianet Suvarna News Asianet Suvarna News

2 ತಿಂಗಳಾದ್ರೂ ಸರ್ಕಾರಿ ನಿವಾಸ ಬಿಡುತ್ತಿಲ್ಲ ಮಾಜಿ ಸಚಿವರು, ಹೊಸ ಸಚಿವರಿಗೆ ಸಿಕ್ತಿಲ್ಲ ಮನೆ!

ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಇಂದಿಗೆ 2 ತಿಂಗಳು ಪೂರ್ಣವಾಗುತ್ತಿದೆ. ಬಿಎಸ್‌ವೈ ಸರ್ಕಾರದ ಮಂತ್ರಿಗಳು ಮಾಜಿಗಳಾಗಿ 2 ತಿಂಗಳಾಯ್ತು. ಆದರೂ ಮಾಜಿ ಸಚಿವರು ಮನೆಯನ್ನು ಖಾಲಿ ಮಾಡಿಲ್ಲ.

Sep 26, 2021, 11:42 AM IST

ಬೆಂಗಳೂರು (ಸೆ. 26): ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಇಂದಿಗೆ 2 ತಿಂಗಳು ಪೂರ್ಣವಾಗುತ್ತಿದೆ. ಬಿಎಸ್‌ವೈ ಸರ್ಕಾರದ ಮಂತ್ರಿಗಳು ಮಾಜಿಗಳಾಗಿ 2 ತಿಂಗಳಾಯ್ತು. ಆದರೂ ಮಾಜಿ ಸಚಿವರು ಮನೆಯನ್ನು ಖಾಲಿ ಮಾಡಿಲ್ಲ.

ಭಾರತ್ ಬಂದ್‌ಗೆ ಬೆಂಬಲ ಇಲ್ಲ, ಮಲ್ಲೇಶ್ವರಂ ಟ್ರೇಡರ್ಸ್ ಅಸೋಸಿಯೇಷನ್ ಸ್ಪಷ್ಟನೆ

ಕುಮಾರಕೃಪಾ ರಸ್ತೆಯ ಮನೆ ಖಾಲಿ ಮಾಡಲು ಸಿ.ಪಿ ಯೋಗೇಶ್ವರ್ ನಕಾರ. ಯೋಗೇಶ್ವರ್ ಮನೆ ಬಿಡದಿದ್ದಕ್ಕೆ ಸಭಾಪತಿ ಹೊರಟ್ಟಿಗೆ ಮನೆ ಸಿಕ್ಕಿಲ್ಲ. ಇನ್ನು ಕ್ರೆಸೆಂಟ್ ರಸ್ತೆಯಲ್ಲಿರುವ ಮನೆ ಬಿಡಲು ಜಗದೀಶ್ ಶೆಟ್ಟರ್ ಒಪ್ಪುತ್ತಿಲ್ಲ. ಸೆವೆನ್ ಮಿನಿಸ್ಟರ್ ಕ್ವಾಟ್ರಸ್‌ನಲ್ಲೇ ರೇಣುಕಾಚಾರ್ಯ ಠಿಕಾಣಿ ಹೂಡಿದ್ದಾರೆ. ಇದರಿಂದ ನೂತನ ಸಚಿವರಿಗೆ ನಿವಾಸ ಸಿಗುತ್ತಿಲ್ಲ.