News Hour: ಬಡವರ ದುಡ್ಡಲ್ಲಿ ಸರ್ಕಾರ ನಡೆಸೋ ಸ್ಥಿತಿಗೆ ಇಳಿದ ಕರ್ನಾಟಕ, ಸರ್ಕಾರಿ ಆಸ್ಪತ್ರೆಗಳ ಸೇವಾ ಶುಲ್ಕವೂ ಏರಿಕೆ!

ವಕ್ಫ್‌, ಬಿಪಿಎಲ್‌ ಕಾರ್ಡ್‌ ಬಳಿಕ ರಾಜ್ಯ ಸರ್ಕಾರ ಬಡವರ ಬೆನ್ನಿನ ಮೇಲೆ ಮತ್ತೊಂದು ಬರೆ ಹಾಕಿದೆ. ಸರ್ಕಾರಿ ಆಸ್ಪತ್ರೆಗಳ ಸೇವಾ ಶುಲ್ಕವನ್ನು ಏರಿಕೆ ಮಾಡುವ ನಿರ್ಧಾರ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.
 

First Published Nov 21, 2024, 11:32 PM IST | Last Updated Nov 21, 2024, 11:32 PM IST

ಬೆಂಗಳೂರು (ನ.21): ಮುಂದುವರಿದ ಸಿದ್ದರಾಮಯ್ಯ ಸರ್ಕಾರದ ಬೆಲೆ ಏರಿಕೆ ಸರಣಿ. ಹಾಲು,ಪೆಟ್ರೋಲ್ ಬಳಿಕ ಸರ್ಕಾರಿ ಆಸ್ಪತ್ರೆ ಸೇವಾ ಶುಲ್ಕವೂ ಹೆಚ್ಚಳ. ಆರೋಗ್ಯ ಸಚಿವರು ಇದನ್ನು ಸಮರ್ಥನೆ ಮಾಡಿಕೊಂಡಿದ್ದರೆ, ಬಿಜೆಪಿ ಖಂಡಿಸಿದೆ.

ಸರ್ಕಾರಿ ಆಸ್ಪತ್ರೆ ದರ ಏರಿಕೆಗೆ BJP ನಾಯಕರು ಸಿಡಿದೆದ್ದಿದ್ದಾರೆ. ಗುರುವಾರ ಸಂಜಯ್ ಗಾಂಧಿ ಆಸ್ಪತ್ರೆಗೆ ವಿಪಕ್ಷ ನಾಯಕ ಅಶೋಖ್‌ ಭೇಟಿ ನೀಡಿ, ರೋಗಿಗಳಿಂದ ಅಹವಾಲು ಸ್ವೀಕರಿಸಿದ್ದಾರೆ. ಸೇವಾ ಶುಲ್ಕ ಏರಿಕೆ ಮಾಡುವ ಮೂಲಕ ತಮ್ಮದು ಪಾಪರ್ ಸರ್ಕಾರ ಎಂದು ಅವರು ತೋರಿಸಿಕೊಂಡಿದ್ದಾರೆ ಎಂದಿದ್ದಾರೆ.

ಸೀರೆಯುಟ್ಟು ಓಡಿ ಬಂದ ನಿವೇದಿತಾ ಗೌಡ, 'ಸಿಂಗಲ್ಸ್‌ಗಳ ಜನ್ಮ ಹಾಳ್‌ ಮಾಡ್ತಿದ್ದೀರಾ' ಅನ್ನೋದಾ?

ಆಸ್ಪತ್ರೆ ರಿಜಿಸ್ಟ್ರೇಷನ್ ಶುಲ್ಕ ಜಾಸ್ತಿ ಮಾಡಿದ್ದಾರೆ.ಲ್ಯಾಬ್, ಅಡ್ಮಿಷನ್, ಸ್ಕ್ಯಾನ್ ಎಲ್ಲವೂ ಜಾಸ್ತಿ ಆಗಿದೆ. ಬಿಪಿಎಲ್ ಕಾರ್ಡ್ ರದ್ದಾಗಿ ಜನ ಕಷ್ಟಪಡ್ತಿದ್ದಾರೆ. ವಕ್ಫ್ ಬೋರ್ಡ್ ನಿಂದ ಜಮೀನು ಹೋಗ್ತಿದೆ.ಈಗ ಆಸ್ಪತ್ರೆಯಲ್ಲೂ ಬೆಲೆ ಏರಿಕೆ ಆಗಿದೆ ಎಂದು ಅವರು ಹೇಳಿದ್ದಾರೆ.