Asianet Suvarna News Asianet Suvarna News

ಕುವೈತ್‌ನಲ್ಲಿ ಅನಿವಾಸಿ ಕನ್ನಡಿಗ ಸಂಶಯಾಸ್ಪದ ಸಾವು, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಟ್ವಿಟರ್ ಅಭಿಯಾನ

ಕುವೈಟ್ ನಲ್ಲಿ ಡಿಸೆಂಬರ್ 25 ರಂದು ಸಂಶಯಾಸ್ಪದ ರೀತಿಯಲ್ಲಿ ಅನಿವಾಸಿ ಕನ್ನಡಿಗ ಸಾಗರ ತಾಲೂಕಿನ ತಾಳಗುಪ್ಪ ನಿವಾಸಿ ಹಾಶಂ ಪರೀದ್ ಸಾಬ್ ಸಾವನ್ನಪ್ಪಿದ್ದಾರೆ. ಈಜಲು ಸಮುದ್ರಕ್ಕೆ ತೆರಳಿದಾಗ  ನೀರಿನಲ್ಲಿ ಮುಳುಗಿ ಆಕಸ್ಮಿಕ ಸಾವೆಂದು  ಕಂಪನಿಯಿಂದ ಕುಟುಂಬಕ್ಕೆ  ಸಂದೇಶ ಬಂದಿದೆ. ಆದರೆ ಇದನ್ನು ಕುಟುಂಬಸ್ಥರು ನಂಬುತ್ತಿಲ್ಲ. 

First Published Jan 13, 2021, 5:38 PM IST | Last Updated Jan 13, 2021, 5:45 PM IST

ಶಿವಮೊಗ್ಗ (ಜ. 13): ಕುವೈಟ್ ನಲ್ಲಿ ಡಿಸೆಂಬರ್ 25 ರಂದು ಸಂಶಯಾಸ್ಪದ ರೀತಿಯಲ್ಲಿ ಅನಿವಾಸಿ ಕನ್ನಡಿಗ, ಸಾಗರ ತಾಲೂಕಿನ ತಾಳಗುಪ್ಪ ನಿವಾಸಿ ಹಾಶಂ ಪರೀದ್ ಸಾಬ್ ಸಾವನ್ನಪ್ಪಿದ್ದಾರೆ. ಈಜಲು ಸಮುದ್ರಕ್ಕೆ ತೆರಳಿದಾಗ  ನೀರಿನಲ್ಲಿ ಮುಳುಗಿ ಆಕಸ್ಮಿಕ ಸಾವೆಂದು  ಕಂಪನಿಯಿಂದ ಕುಟುಂಬಕ್ಕೆ  ಸಂದೇಶ ಬಂದಿದೆ. ಆದರೆ ಇದನ್ನು ಕುಟುಂಬಸ್ಥರು ನಂಬುತ್ತಿಲ್ಲ. 

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ಯಾಕೆ..? ಸ್ಪಷ್ಟನೆ ಕೊಟ್ಟ ಎಚ್ ನಾಗೇಶ್

ಹೆತ್ತವರ ಕೋರಿಕೆಗೆ ಕೇಂದ್ರ ವಿದೇಶಾಂಗ ಇಲಾಖೆಯ ಮೂಲಕ  ಕುವೈಟ್ ಭಾರತೀಯ ರಾಯಭಾರಿ ಕಚೇರಿಗೆ ತಲುಪಿಸಲು ಕರ್ನಾಟಕ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯವನ್ನು ಪ್ರತಿಭಟಿಸಿ ಟ್ವಿಟ್ಟರ್ ಅಭಿಯಾನ ಕೂಡ ಅರಂಭಿಸಲಾಗಿದೆ.  ಹಾಶಂ ಫರಿದ್ ಸಾವಿಗೆ ನ್ಯಾಯ ಕೋರಿ ಮನೆಯವರು ಕಣ್ಣೀರಿಡುತ್ತಿದ್ದಾರೆ.