ಮೊದಲ ಡೋಸ್ ಹಾಕುವುದಿಲ್ಲ, 2 ನೇ ಡೋಸ್‌ಗೆ ಆದ್ಯತೆ : ಈಶ್ವರಪ್ಪ
- ರಾಜ್ಯದಲ್ಲಿ ಲಸಿಕೆ ಕೊರತೆ ಬಗ್ಗೆ ಹೈಕೋರ್ಟ್ ಚಾಟಿ
-ಶಿವಮೊಗ್ಗದಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ
- 2 ನೇ ಡೋಸ್‌ನವರಿಗೆ ಮೊದಲ ಅದ್ಯತೆ
ಬೆಂಗಳೂರು (ಮೇ. 13): ರಾಜ್ಯದಲ್ಲಿ ಲಸಿಕೆ ಕೊರತೆ ಬಗ್ಗೆ ಹೈಕೋರ್ಟ್ ಚಾಟಿ ಬೀಸಿದ್ದಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆಯನ್ನು ನೀಡಿದ್ದಾರೆ.
ಕೊರೊನಾ ವಾಕ್ಸಿನೇಷನ್ ಎರಡನೇ ಡೋಸ್ ಲಸಿಕೆ ಕೊರತೆ ಹಿನ್ನೆಲೆಯಲ್ಲಿ ಹೊಸದಾಗಿ ಮೊದಲನೇ ಡೋಸ್ ಹಾಕುವುದಿಲ್ಲ. ಹೈ ಕೋರ್ಟ್ ಗೆ ರಾಜ್ಯ ಸರ್ಕಾರದ ಕಾರ್ಯದರ್ಶಿ ರವಿ ಕುಮಾರ್ ಕೂಡ ನಮ್ಮಲ್ಲಿ ಲಸಿಕೆ ಸ್ಟಾಕ್ ಇಲ್ಲ ಎಂದು ಇದನ್ನು ಸ್ಪಷ್ಟ ಪಡಿಸಿದ್ದಾರೆ. ಲಸಿಕೆ ಬಂದ ಹಾಗೆ, ಕೊಡುತ್ತೇವೆ ಎಂದು ಈಶ್ವರಪ್ಪ ಹೇಳಿದ್ದಾರೆ.