Asianet Suvarna News Asianet Suvarna News

ಕೊರೋನಾ ಹೆಮ್ಮಾರಿಯ ಮೂರನೇ ಕರಾಳ ಕಣ್ಣಿಗೆ ಮಕ್ಕಳೇ ಟಾರ್ಗೆಟ್‌!

ಹೆಮ್ಮಾರಿಯ ಮೂರನೇ ಕರಾಳ ಕಣ್ಣಿಗೆ ಮಕ್ಕಳೇ ಟಾರ್ಗೆಟ್. ವೈರಸ್‌ ಸುನಾಮಿಯಿಂದ ಮಕ್ಕಳನ್ನು ಕಾಪಾಡೋದು ಹೇಗೆ?

ನವದೆಹಲಿ(ಮೇ.13): ಹೆಮ್ಮಾರಿಯ ಮೂರನೇ ಕರಾಳ ಕಣ್ಣಿಗೆ ಮಕ್ಕಳೇ ಟಾರ್ಗೆಟ್. ವೈರಸ್‌ ಸುನಾಮಿಯಿಂದ ಮಕ್ಕಳನ್ನು ಕಾಪಾಡೋದು ಹೇಗೆ?

ಹೌದು ಈಗಾಗಲೇ ದೇಶದಲ್ಲಿ ಮೊದಲ ಹಾಗೂ ಎರಡನೇ ಅಲೆ ದಾಳಿ ಇಟ್ಟಿದೆ. ಈ ದಾಲಿ ದೇಶವನ್ನು ಬಗ್ಗು ಬಡಿದಿದ್ದು, ಅನೇಕರು ತಮ್ಮ ಆಪ್ತರನ್ನು ಕಳೆದುಕೊಂಡಿದ್ದಾರೆ. ಈ ನೋವನ್ನು ತಡೆಯಲಾರದೆ ಜನರು ರೋದಿಸುತ್ತಿದ್ದಾರೆ.

ಹೀಗಿರುವಾಗ ಮೂರನೇ ಅಲೆ ದಾಳಿ ಇಡುವ ಸೂಚನೆ ಸಿಕ್ಕಿದ್ದು, ಇದು ಹೆತ್ತವರನ್ನು ಮತ್ತಷ್ಟು ಚಿಂತೆಗೆ ದೂಡಿದೆ. ಅತ್ತ ಸರ್ಕಾರಕ್ಕೂ ಇದು ಬಹುದೊಡ್ಡ ಸವಾಲಾಗಿದೆ. ಎರಡನೇ ಅಲೆ ಸಂದರ್ಭದಲ್ಲಿ ಆಕ್ಸಿಜನ್, ಲಸಿಕೆ ಕೊರತೆ ಜನರನ್ನು ಕಂಗಾಲಾಗಿಸಿತ್ತು. ಹೀಗಿರುವಾಗ ಮೂರನೇ ಅಲೆಗೆ ಸರ್ಕಾರ ಹೇಗೆ ಸಿದ್ಧತೆ ನಡೆಸುತ್ತೆ ಎಂಬುವುದು ಮಹತ್ವ ಪಡೆದುಕೊಳ್ಳುತ್ತದೆ.