ಶಿವಮೊಗ್ಗ ದುರಂತದ ಭಯಾನಕ ದೃಶ್ಯಗಳಿವು..

ಶಿವಮೊಗ್ಗದ ಹುನಸೋಡು ಕಲ್ಲು ಕ್ರಷರ್ ಗಣಿಯಲ್ಲಿನ ಸ್ಫೋಟ ಮಲೆನಾಡನ್ನು ಬೆಚ್ಚಿ ಬೀಳಿಸಿದೆ. ಗಣಿಗಾರಿಕೆಗೆಂದು ಲಾರಿಯಲ್ಲಿ ಸಂಗ್ರಹಿಸಿಟ್ಟಿದ್ದ ಜೆಲ್ ಮಾದರಿಯ ಸ್ಫೋಟಕ ಸ್ಫೋಟಿಸಿ ಈ ದುರಂತ ಸಂಭವಿಸಿದೆ.

Share this Video
  • FB
  • Linkdin
  • Whatsapp

ಶಿವಮೊಗ್ಗ (ಜ. 23): ಹುನಸೋಡು ಕಲ್ಲು ಕ್ರಷರ್ ಗಣಿಯಲ್ಲಿನ ಸ್ಫೋಟ ಮಲೆನಾಡನ್ನು ಬೆಚ್ಚಿ ಬೀಳಿಸಿದೆ. ಗಣಿಗಾರಿಕೆಗೆಂದು ಲಾರಿಯಲ್ಲಿ ಸಂಗ್ರಹಿಸಿಟ್ಟಿದ್ದ ಜೆಲ್ ಮಾದರಿಯ ಸ್ಫೋಟಕ ಸ್ಫೋಟಿಸಿ ಈ ದುರಂತ ಸಂಭವಿಸಿದೆ. ಈ ಅವಘಡದಲ್ಲಿ ಮೃತಪಟ್ಟವರ ದೇಹ ಛಿದ್ರ ಛಿದ್ರವಾಗಿದ್ದು, ನೋಡಲು ಭಯಾನಕವಾಗಿದೆ. ಮೃತಪಟ್ಟಿರುವ ಭದ್ರಾವತಿಯ ನಾಲ್ವರಲ್ಲಿ ಪ್ರವಿಣ್ ಕುಮಾರ್, ಮಂಜುನಾಥ್ ಎಂಬುವವರ ಮೃತ ದೇಹವನ್ನು ಗುರುತಿಸಲಾಗಿದ್ದು, ಇನ್ನುಳಿದವರ ಹೆಸರು ಗೊತ್ತಾಗಿಲ್ಲ. ಸ್ಫೋಟದ ರಭಸಕ್ಕೆ ಲಾರಿಯಲ್ಲಿದ್ದವರು ಛಿದ್ರ ಛಿದ್ರವಾಗಿ ಗಾಳಿಯಲ್ಲಿ ಎಸೆಯಲ್ಪಟ್ಟಿದ್ದು ಅವಶೇಷಗಳನ್ನು ಹುಡುಕುವುದಕ್ಕೆ ಹರಸಾಹಸ ನಡೆಸಲಾಗಿದೆ. ಆ ದೃಶ್ಯಗಳು ಮನಕಲಕುವಂತಿದೆ. 

ಕಲ್ಲು ಕ್ವಾರಿ ಸ್ಫೋಟಕ್ಕೆ ಅಸಲಿ ಕಾರಣವೇನು? ಸುವರ್ಣನ್ಯೂಸ್ Exclusive!

Related Video