ವಯೋವೃದ್ದೆ ಸೇರಿ ಬಡಕುಟುಂಬವನ್ನು ಮನೆಯಿಂದ ಹೊರದಬ್ಬಿದ ಪುರಸಭೆ ಅಧಿಕಾರಿ!
ಶಿಗ್ಗಾವಿ ಪುರಸಭೆ ಮುಖ್ಯ ಅಧಿಕಾರಿ ಮಲ್ಲೇಶ್ ದಬ್ಬಾಳಿಕೆಗೆ ಬಡಕುಟುಂಬ ಬೀದಿಗೆ ಬಿದ್ದಿದೆ. 75 ವರ್ಷದ ವಯೋವೃದ್ದೆ ನೀಲವ್ವ, ರೇಣವ್ವ ಎಂಬುವರನ್ನು ರಾತ್ರೋರಾತ್ರಿ ಕೊರೆವ ಚಳಿಯಲ್ಲಿ ಹೊರಹಾಕಲಾಗಿದೆ.
ಶಿಗ್ಗಾವಿ(ಡಿ.30) ಸಣ್ಣ ಮನೆಯಲ್ಲಿ ವಾಸವಿದ್ದ ಬಡ ಕುಟುಂಬದ ಮೇಲೆ ಶಿಗ್ಗಾವಿ ಪುರಸಭೆ ಮುಖ್ಯ ಅಧಿಕಾರಿ ಮಲ್ಲೇಶ್ ದರ್ಪ ತೋರಿದ ಘಟನೆ ವರದಿಯಾಗಿದೆ. ಶಾಂತವ್ವ ಗಡ್ಡಿ ಎಂಬ ಬಡ ಮಹಿಳೆಯ ಕುಟುಂಬವನ್ನು ಕೊರೆವ ಚಳಿಯಲ್ಲಿ ಅಧಿಕಾರಿ ಮನೆಯಿಂದ ಹೊರದಬ್ದಿದ್ದಾರೆ. ಶಿಗ್ಗಾವಿ ಪಟ್ಟಣದ ಗಂಜಿಗಟ್ಟಿ ರಸ್ತೆಯಲ್ಲಿರುವ ಜಿ ಪ್ಲಸ್ 1 ಮನೆಯ ನಂಬರ್ 94 ರಲ್ಲಿ ವಾಸವಿದ್ದ ಬಡ ಕುಟುಂಬದ ಶಾಂತವ್ವ, 75 ವರ್ಷದ ವಯೋವೃದ್ದೆ ನೀಲವ್ವ, ರೇಣವ್ವ ಎಂಬುವರನ್ನು ಮನೆಯಿಂದ ಹೊರಗಟ್ಟಲಾಗಿದೆ. ಮನೆ ಮಂಜೂರೇ ಆಗಿಲ್ಲ, ಸಂಸಾರ ಮಾಡೋಕೆ ಬಂದಿದಾಳೆ, ಮಲಗೋಕೆ ಬಂದಿದಾಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮನೆಯಿಂದ ಹೊರಹಾಕಿದ ಘಟನೆ ವರದಿಯಾಗಿದೆ.