PSI recruitment scam ಪೊಲೀಸ್ ಇಲಾಖೆಗೆ ಸುತ್ತಿಕೊಂಡ PSI ಅಕ್ರಮ!

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ  ಬಗೆದಷ್ಟೂ ದಿನಕ್ಕೊಂದು ಅಕ್ರಮಗಳು ಬಯಲಾಗುತ್ತಿದೆ. ಅಕ್ರಮದಲ್ಲಿ ಬೆಂಗಳೂರು ಕೇಂದ್ರಬಿಂದು ಹೇಳಲಾಗುತ್ತಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ.4): 545 ಪಿಎಸ್ಐ ನೇಮಕಾತಿ (PSI recruitment scam ) ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾಗುವ ಭಾರೀ ಅಕ್ರಮ ವಿಚಾರದಲ್ಲಿ ಸಿಐಡಿ (Criminal Investigation Department - CID) ಬಗೆದಷ್ಟೂ ದಿನಕ್ಕೊಂದು ಹೊಸ ವಿಚಾರಗಳು ಹೊರಬರುತ್ತಿವೆ. ಅಕ್ರಮದ ಕೇಂದ್ರ ಹಿಂದೆ ಕಲಬುರಗಿ (Kalaburagi) ಎಂದು ಹೇಳಲಾಗುತ್ತಿದ್ದರೂ ಈಗ ಬೆಂಗಳೂರು ಅಕ್ರಮದ ಮಾಸ್ಟರ್ ಕೇಂದ್ರ ಬಿಂದು ಎಂದು ಹೇಳಲಾಗುತ್ತಿದೆ.

PSI recruitment scam ಪಿಎಸ್‌ಐ ಹುದ್ದೆಗಳ ಭರ್ತಿಗೆ ಎಎಸ್‌ಐಗಳಿಗೆ ಬಡ್ತಿ

ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಡಿವೈಎಸ್‌ಪಿ (DYSP), ಎಸಿಪಿ (ACP), ಸಿಪಿಐ (CPI) ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಡಿವೈಎಸ್ಪಿ ಶಾಂತರಾಜು (Shantharaju) ಅವರನ್ನು ಸಿಐಡಿ ಅಧಿಕಾರಿಗಳು ಕರೆದು ವಿಚಾರಣೆ ನಡೆಸಿದ್ದು, ಹಗರಣ ಹೊರಬರುತ್ತಿದ್ದಂತೆ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆಗೊಂಡಿದ್ದಾರೆ. ಡಿವೈಎಸ್ಪಿ ಶಾಂತರಾಜು ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

Related Video