Chamarajanagar: ಮೇಕೆದಾಟು ಪಾದಯಾತ್ರೆ ಪಕ್ಷಾತೀತ ಹೋರಾಟ: ಸತೀಶ್ ಜಾರಕಿಹೊಳಿ
* ದೆಹಲಿಯಲ್ಲಿ ಪಕ್ಷ ಸಂಘಟನೆ ಬಗ್ಗೆ ವರಿಷ್ಠರಿಂದ ಚರ್ಚೆ
* ಕಾಂಗ್ರೆಸ್‌ನಲ್ಲಿ ಯಾವುದೇ ಬಣ ಇಲ್ಲ. ಎಲ್ಲರೂ ಒಟ್ಟಿಗೆ ಇದ್ದೇವೆ
* ಲಖನ್ ಜಾರಕಿಹೊಳಿ ಪಕ್ಷಕ್ಕೆ ಕರೆತರುವ ಬಗ್ಗೆ ಚರ್ಚೆ ನಡೆದಿಲ್ಲ
ಚಾಮರಾಜನಗರ(ಫೆ.27): ಮೇಕೆದಾಟು ಪಾದಯಾತ್ರೆ ಇಂದಿನಿಂದ(ಭಾನುವಾರ) ಆರಂಭವಾಗುತ್ತದೆ. ಮೇಕೆದಾಟಿನಲ್ಲಿ ಅಣೆಕಟ್ಟು ಅಗಬೇಕು ಎಂಬ ವಿಚಾರದ ಮೇಲೆಯೇ ಪಾದಯಾತ್ರೆ ನಡೆಯುತ್ತಿದೆ. 8-10 ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಇದಾಗಿದೆ. ಇದು ಪಕ್ಷಾತೀತ ಹೋರಾಟವಾಗಿದೆ. ಯಾರೂ ಏನೇ ಹೇಳಲಿ ನಮ್ಮ ಹೋರಾಟ ನೀರಿಗಾಗಿ ಅಂತ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಪಕ್ಷ ಸಂಘಟನೆ ಬಗ್ಗೆ ವರಿಷ್ಠರು ಚರ್ಚೆ ಮಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ಯಾವುದೇ ಬಣ ಇಲ್ಲ. ಎಲ್ಲರೂ ಒಟ್ಟಿಗೆ ಇದ್ದೇವೆ ಅಂತ ಹೇಳಿದ್ದಾರೆ.
Mekedatu Padayatra: ಜನರನ್ನು ಮೂರ್ಖರನ್ನು ಮಾಡಲು ಹೊರಟಿರುವ ಪಾದಯಾತ್ರೆ: ಸುಧಾಕರ್
ಬೆಳಗಾವಿ ರಾಜಕಾರಣದಲ್ಲಿ ಸ್ಥಳೀಯ ನಿರ್ಧಾರಗಳನ್ನು ಸ್ಥಳೀಯ ನಾಯಕರು ಒಗ್ಗೂಡಿ ತೀರ್ಮಾನ ಮಾಡುತ್ತೇವೆ. ವರಿಷ್ಠರಿಗೆ ಎಲ್ಲಾ ಜಿಲ್ಲೆಗೂ ಹೋಗಿ ಸ್ಥಳೀಯ ನಾಯಕರಿಗೆ ಮಾರ್ಗದರ್ಶನ ಮಾಡುವ ಅಧಿಕಾರ ಇದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಲಖನ್ ಜಾರಕಿಹೊಳಿಯನ್ನ ಪಕ್ಷಕ್ಕೆ ಕರೆತರುವ ಬಗ್ಗೆ ಸದ್ಯಕ್ಕಂತೂ ಚರ್ಚೆ ನಡೆದಿಲ್ಲ. ಅದರ ಅವಶ್ಯಕತೆಯೂ ನಮಗಿಲ್ಲ ಅಂತ ತಿಳಿಸಿದ್ದಾರೆ.