MSIL ಬಗ್ಗೆ ಅಧ್ಯಯನ ಮಾಡಿ ನನ್ನ ಕೆಲಸ ಶುರುಮಾಡ್ತೇನೆ: ಹರತಾಳು ಹಾಲಪ್ಪ

ಮುಖ್ಯಮಂತ್ರಿ ಯಡಿಯೂರಪ್ಪ ನನ್ನ ಮೇಲೆ ವಿಶ್ವಾಸವನ್ನಿಟ್ಟು ಈ ಸ್ಥಾನವನ್ನು ನೀಡಿದ್ದಾರೆ. ಅವರ ವಿಶ್ವಾಸವನ್ನು ಉಳಿಸಿಕೊಳ್ಳುವ ಕೆಲಸವನ್ನು ಮಾಡುತ್ತೇನೆ. MSIL ಬಗ್ಗೆ ನಾನಿನ್ನು ತಿಳಿದುಕೊಳ್ಳುವುದು ಸಾಕಷ್ಟಿದೆ. ಒಂದೆರಡು ದಿನಗಳಲ್ಲಿ ಅಧ್ಯಯನ ಮಾಡಿ ನನ್ನ ಕೆಲಸವನ್ನು ಶುರು ಮಾಡುತ್ತೇನೆ ಎಂದು ಹಾಲಪ್ಪ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

First Published Jul 31, 2020, 2:08 PM IST | Last Updated Jul 31, 2020, 2:25 PM IST

ಬೆಂಗಳೂರು(ಜು.31): MSIL ಅಧ್ಯಕ್ಷರಾಗಿ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಅಧಿಕಾರ ಸ್ವೀಕರಿಸಿದ್ದಾರೆ. ವಿಧಾನಸೌಧದಲ್ಲಿ ಹಾಲಪ್ಪ ಅಧಿಕಾರ ಸ್ವೀಕರಿಸಿದ್ದು, ಈ ವೇಳೆ ಹಲವು ಸಚಿವರು ಶಾಸಕರು ಹಾಜರಿದ್ದರು.

ಮುಖ್ಯಮಂತ್ರಿ ಯಡಿಯೂರಪ್ಪ ನನ್ನ ಮೇಲೆ ವಿಶ್ವಾಸವನ್ನಿಟ್ಟು ಈ ಸ್ಥಾನವನ್ನು ನೀಡಿದ್ದಾರೆ. ಅವರ ವಿಶ್ವಾಸವನ್ನು ಉಳಿಸಿಕೊಳ್ಳುವ ಕೆಲಸವನ್ನು ಮಾಡುತ್ತೇನೆ. MSIL ಬಗ್ಗೆ ನಾನಿನ್ನು ತಿಳಿದುಕೊಳ್ಳುವುದು ಸಾಕಷ್ಟಿದೆ. ಒಂದೆರಡು ದಿನಗಳಲ್ಲಿ ಅಧ್ಯಯನ ಮಾಡಿ ನನ್ನ ಕೆಲಸವನ್ನು ಶುರು ಮಾಡುತ್ತೇನೆ ಎಂದು ಹಾಲಪ್ಪ ಹೇಳಿದ್ದಾರೆ.

ಬಿಜೆಪಿ ಸರ್ಕಾರಕ್ಕೆ ವರ್ಷ: ಶಾಸಕರಿಗೆ ಭರ್ಜರಿ ಗಿಫ್ಟ್‌ ನೀಡಿದ ಸಿಎಂ ಯಡಿಯೂರಪ್ಪ

ಈ ವೇಳೆ ಕೈಗಾರಿಕ ಸಚಿವ ಜಗದೀಶ್ ಶೆಟ್ಟರ್, ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಗಳಾದ ಎಸ್. ಆರ್ ವಿಶ್ವನಾಥ್ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.