ದಿನಸಿ ಅಂಗಡಿ, ಮಾಲ್, ಮಾರ್ಕೆಟ್‌ಗಳಲ್ಲಿ ಅಡುಗೆ ಎಣ್ಣೆ ಖರೀದಿಸೋದು ಸುಲಭವಿಲ್ಲ, ಕಂಡೀಶನ್ ಅಪ್ಲೈ!

ಅಡುಗೆ ಎಣ್ಣೆಯನ್ನು ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ತಪ್ಪಿಸಲು ದಿನಸಿ ಅಂಗಡಿ, ಮಾಲ್‌ಗಳಲ್ಲಿ ಎಣ್ಣೆ ಖರೀದಿಗೆ ನಿರ್ಬಂಧ ವಿಧಿಸಲಾಗಿದೆ. ಒಬ್ಬರಿಗೆ 2 ಲೀಟರ್‌ನಷ್ಟು ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 09): ರಷ್ಯಾ- ಉಕ್ರೇನ್ ನಡುವಿನ ಯುದ್ಧ ಜಾಗತಿಕ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ. ಯುದ್ಧ ನಡೆಯುತ್ತಿರುವುದರಿಂದ ಉಕ್ರೇನ್‌ನಿಂದ ಸೂರ್ಯಕಾಂತಿ ಎಣ್ಣೆ ಬಾರದಿರುವುದರಿಂದ ಅದರ ಅಭಾವದ ಜೊತೆ ದರದಲ್ಲೂ ಹೆಚ್ಚಳವಾಗಿದೆ. ಜನರು ಪರ್ಯಾಯವಾಗಿ ಪಾಮ್‌ ಆಯಿಲ್ ಬಳಕೆ ಮಾಡುತ್ತಿರುವುದರಿಂದ ಅದರ ಬೆಲೆಯೂ ಹೆಚ್ಚುತ್ತಿದೆ. 

ಇದು ರಷ್ಯಾ ಯುದ್ಧವಲ್ಲ, ಪುಟಿನ್ ಯುದ್ಧ: EU ಸಂಸದ ಮಾಲ್ತಿಗಾಲಿ Asianet News ಜೊತೆ ಮಾತು!

ಅಡುಗೆ ಎಣ್ಣೆಯನ್ನು ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ತಪ್ಪಿಸಲು ದಿನಸಿ ಅಂಗಡಿ, ಮಾಲ್‌ಗಳಲ್ಲಿ ಎಣ್ಣೆ ಖರೀದಿಗೆ ನಿರ್ಬಂಧ ವಿಧಿಸಲಾಗಿದೆ. ಒಬ್ಬರಿಗೆ 2 ಲೀಟರ್‌ನಷ್ಟು ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ. ದಿನಸಿ ಖರೀದಿಸಿದರಷ್ಟೇ ಅಡುಗೆ ಎಣ್ಣೆ ಖರೀದಿಗೆ ಅವಕಾಶ. ಕೇವಲ ಅಡುಗೆ ಎಣ್ಣೆ ಖರೀದಿಗೆ ಮಾಲಿಕರು ಒಪ್ಪುತ್ತಿಲ್ಲ. ಬೇಡಿಕೆಯಷ್ಟು ಎಣ್ಣೆ ಪೂರೈಕೆಯಾಗುತ್ತಿಲ್ಲ ಹಾಗಾಗಿ ಈ ನಿರ್ಬಂಧ ಎನ್ನುತ್ತಿದ್ದಾರೆ ಮಾಲಿಕರು. 

Related Video