ಮೃತ ಯುವಕರ ಕುಟುಂಬಸ್ಥರಿಗೆ ಯಶ್‌ ಸಾಂತ್ವನ, ಕಣ್ಣೀರಿಟ್ಟ ರಾಕಿಂಗ್‌ ಸ್ಟಾರ್‌!

ಯಶ್‌ ಅವರ ಜನ್ಮದಿನದ ನಿಮಿತ್ತ ಬೃಹತ್‌ ಕಟೌಟ್‌ ಹಾಕುವ ವೇಳೆ ವಿದ್ಯುತ್‌ ತಗುಲು ಸಾವು ಕಂಡಿದ್ದ ಮೂವರು ಅಭಿಮಾನಿಗಳ ಕುಟುಂಬವನ್ನು ಭೇಟಿ ಮಾಡಿದ ರಾಕಿಂಗ್‌ ಸ್ಟಾರ್‌ ಯಶ್‌, ಕುಟುಂಬಸ್ಥರಿಗೆ ಸಾಂತ್ವನ ನೀಡಿದ್ದಾರೆ.

Share this Video
  • FB
  • Linkdin
  • Whatsapp

ಗದಗ (ಜ.8): ರಾಕಿಂಗ್‌ ಸ್ಟಾರ್‌ ಯಶ್‌ ಅವರ ಜನ್ಮದಿನದ ನಿಮಿತ್ತ ಬೃಹತ್‌ ಕಟೌಟ್‌ ಹಾಕುವ ವೇಳೆ ವಿದ್ಯುತ್‌ ತಗುಲಿ ದಾರುಣ ಸಾವು ಕಂಡಿದ್ದ ಮೂವರು ಅಭಿಮಾನಿಗಳ ಕುಟುಂಬವನ್ನು ಭೇಟಿ ಮಾಡಿದ್ ಯಶ್‌ ಅವರಿಗೆ ಸಂತೈಸಿದ್ದಾರೆ.

ಹುಬ್ಬಳ್ಳಿಗೆ ವಿಮಾನದಲ್ಲಿ ಪ್ರಯಾಣಿಸಿದ ಯಶ್‌, ಅಲ್ಲಿಂದ ಸೂರಣಗಿಗೆ ರಸ್ತೆ ಮಾರ್ಗದಲ್ಲಿ ತೆರಳಿದರು. ಸಂಜೆಯ ವೇಳೆಗೆ ಘಟನೆ ನಡೆದ ಊರಿಗೆ ತಲುಪಿದ ಯಶ್‌, ಮೂರೂ ಕುಟುಂಬದವನ್ನು ಭೇಟಿ ಮಾಡಿ ಅವರಿಗೆ ಸಂತೈಸಿದ್ದಾರೆ.

ಯಶ್ ಬರ್ತ್‌ಡೇಗೆ ಕಟೌಟ್ ನಿಲ್ಲಿಸಲು ಹೋಗಿ ಭಾರೀ ಅನಾಹುತ; ವಿದ್ಯುತ್ ತಗುಲಿ ಮೂವರು ಅಭಿಮಾನಿಗಳು ಸ್ಥಳದಲ್ಲೇ ಸಾವು!

ಈ ವೇಳೆ ಘಟನೆಯ ವಿವರಗಳನ್ನು ಪಡೆದು ಯಶ್‌ ಭಾವುಕರಾದರು. ಮೃತ ಅಭಿಮಾನಿ ಹನುಮಂತ ಹರಿಜನ, ಮುರಳಿ ಹಾಗೂ ನವೀನ್‌ ಅವರು ಕುಟುಂಬಕ್ಕೆ ಯಶ್‌ ಭೇಟಿ ನೀಡಿದರು. ಈ ವೇಳೆ ಘಟನೆಯ ವಿವರಗಳನ್ನು ಅವರು ಪಡೆದುಕೊಂಡರು.

Related Video