Asianet Suvarna News Asianet Suvarna News

ಸೋಂಕಿತರ ಕಣ್ಣೀರಲ್ಲೂ ಕೊರೊನಾ ಇರತ್ತಂತೆ ಜೋಕೆ!

ಸೋಂಕಿತರ ಕಣ್ಣೀರಿನಲ್ಲೂ ಕೊರೊನಾ ಸೋಂಕಿನ ವೈರಾಣು ಇರುತ್ತವೆ ಎಂವ ವಿಷಯ ಬೆಂಗಳೂರಿನ ಮಿಂಟೋ ಆಸ್ಪತ್ರೆಯ ತಜ್ಞರ ತಂಡದ ಅಧ್ಯಯನದಲ್ಲಿ ಬಯಲಾಗಿದೆ. ಹೀಗಾಗಿ ಕೊರೋನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಕಣ್ಣಿನ ಸುರಕ್ಷತೆಯೂ ಮುಖ್ಯ ಎಂದು ತಿಳಿದು ಬಂದಿದೆ. 
 

ಬೆಂಗಳೂರು (ಜೂ. 15): ಸೋಂಕಿತರ ಕಣ್ಣೀರಿನಲ್ಲೂ ಕೊರೊನಾ ಸೋಂಕಿನ ವೈರಾಣು ಇರುತ್ತವೆ ಎಂವ ವಿಷಯ ಬೆಂಗಳೂರಿನ ಮಿಂಟೋ ಆಸ್ಪತ್ರೆಯ ತಜ್ಞರ ತಂಡದ ಅಧ್ಯಯನದಲ್ಲಿ ಬಯಲಾಗಿದೆ. ಹೀಗಾಗಿ ಕೊರೋನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಕಣ್ಣಿನ ಸುರಕ್ಷತೆಯೂ ಮುಖ್ಯ ಎಂದು ತಿಳಿದು ಬಂದಿದೆ. 

ಮತ್ತೊಂದೆಡೆ ಮಿಂಟೋ ಆಸ್ಪತ್ರೆ ತಜ್ಞರು ನಡೆಸಿದ ಅಧ್ಯಯನದಲ್ಲಿ ರೋಗ ಲಕ್ಷಣಗಳಿಲ್ಲದ ಸೋಂಕಿತನ ಕಣ್ಣಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಹೀಗಾಗಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ. 

ಕಣ್ಣೀರಿನಲ್ಲೂ ಇರುತ್ತೆ ಕೊರೊನಾ; ವೈದ್ಯಲೋಕವನ್ನೇ ಬೆಚ್ಚಿ ಬೀಳಿಸಿದೆ ಈ ಸಂಶೋಧನೆ

ಕಣ್ಣಿನ ಚಿಕಿತ್ಸೆ ನೀಡುವ ವೇಳೆ ರೋಗಿಯಿಂದ ವೈದ್ಯರಿಗೆ ಅಥವಾ ವೈದ್ಯರಿಂದ ರೋಗಿಗೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಾರ್ವಜನಿಕರು ಪದೇ ಪದೇ ಕಣ್ಣು ಮುಟ್ಟಿಕೊಳ್ಳಬಾರದು. ಸ್ವಚ್ಛವಾಗಿ ಕೈ ತೊಳೆದ ಬಳಿಕವಷ್ಟೇ ಮುಟ್ಟಿಕೊಳ್ಳಬೇಕೆಂದು ಮಿಂಟೋ ಅಸ್ಪತ್ರೆ ನಿರ್ದೇಶಕಿ ಸುಜಾತಾ ರಾಥೋಡ್ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

 

Video Top Stories