ಮಹಾಮಳೆ, ಮಹಾ ಪ್ರವಾಹ, ಮುಳುಗಿತು ಕೃಷ್ಣಾನಗರಿ..!

ಕೃಷ್ಣಾ ನಗರಿ ಉಡುಪಿ ದಾಖಲೆ ಮಳೆಗೆ ಸಾಕ್ಷಿಯಾಗಿದೆ. ಕೃಷ್ಣ ಪರಮಾತ್ಮನಿಗೂ ವರುಣದೇವ ತನ್ನ ಪ್ರತಾಪ ತೋರಿಸಿದ್ದಾನೆ. ಕಳೆದ 3 ದಿನಗಳಿಂದ ಎಡೆಬಿಡದೇ ಸುರಿದ ಭಾರೀ ಮಳೆಗೆ ಜನ ಸುಸ್ತಾಗಿ ಹೋಗಿದ್ದಾರೆ. ನಗರವಾಸಿಗಳು ತಮ್ಮ ಮನೆಗಳನ್ನು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ಧಾವಿಸಿದ್ದರು. ಸ್ವರ್ಣಾ ನದಿ ತನ್ನ ದಿಕ್ಕನ್ನೇ ಬದಲಾಯಿಸಿದ್ದಳು. 

First Published Sep 22, 2020, 12:32 PM IST | Last Updated Sep 22, 2020, 12:43 PM IST

ಬೆಂಗಳೂರು (ಸೆ. 22): ಕೃಷ್ಣಾ ನಗರಿ ಉಡುಪಿ ದಾಖಲೆ ಮಳೆಗೆ ಸಾಕ್ಷಿಯಾಗಿದೆ. ಕೃಷ್ಣ ಪರಮಾತ್ಮನಿಗೂ ವರುಣದೇವ ತನ್ನ ಪ್ರತಾಪ ತೋರಿಸಿದ್ದಾನೆ. ಕಳೆದ 3 ದಿನಗಳಿಂದ ಎಡೆಬಿಡದೇ ಸುರಿದ ಭಾರೀ ಮಳೆಗೆ ಜನ ಸುಸ್ತಾಗಿ ಹೋಗಿದ್ದಾರೆ. ನಗರವಾಸಿಗಳು ತಮ್ಮ ಮನೆಗಳನ್ನು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ಧಾವಿಸಿದ್ದರು. ಸ್ವರ್ಣಾ ನದಿ ತನ್ನ ದಿಕ್ಕನ್ನೇ ಬದಲಾಯಿಸಿದ್ದಳು. 

ರಾಜ್ಯಾದ್ಯಂತ ಧಾರಾಕಾರ ಮಳೆ; ವರುಣನ ಆರ್ಭಟಕ್ಕೆ ಜನ ಹೈರಾಣ..!

ಮಳೆಯ ಅಬ್ಬರಕ್ಕೆ ಉಡುಪಿಯ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿತ್ತು. ಮನೆಯಿಂದ ಯಾರೂ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಕೃಷ್ಣ ಮಠ ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ರಥಬೀದಿಯಲ್ಲಿ ವಾಹನಗಳು ನೀರಿನಲ್ಲಿ ತೇಲಾಡುತ್ತಿತ್ತು. ಇವೆಲ್ಲವನ್ನು ದೃಶ್ಯಗಳಲ್ಲಿ ನೋಡೋಣ ಬನ್ನಿ..!