ಸಿದ್ದರಾಮಯ್ಯಗೆ ದೋಖಾ, ಹಳ್ಳ ಹತ್ತಿತು ಸಾಲಮನ್ನಾ ಯೋಜನೆ; ಕೋಟಿ ಕೋಟಿ ಗುಳುಂ
2007, ಜುಲೈ 21 ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ರೈತರಿಗೆ ಬಂಪರ್ ಬಹುಮಾನ ಕೊಟ್ಟಿದ್ದರು. ರೈತರ ಸಾಲಮನ್ನಾ ಮಾಡಿದ್ದರು. ಪ್ರತಿ ರೈತನ 50 ಸಾವಿರ ರೂಪಾಯಿ ಸಾಲಮನ್ನಾ ಎಂದು ಘೋಷಣೆ ಮಾಡಿದರು.
ಬೆಂಗಳೂರು (ಅ. 09): 2007, ಜುಲೈ 21 ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ರೈತರಿಗೆ ಬಂಪರ್ ಬಹುಮಾನ ಕೊಟ್ಟಿದ್ದರು. ರೈತರ ಸಾಲಮನ್ನಾ ಮಾಡಿದ್ದರು. ಪ್ರತಿ ರೈತನ 50 ಸಾವಿರ ರೂಪಾಯಿ ಸಾಲಮನ್ನಾ ಎಂದು ಘೋಷಣೆ ಮಾಡಿದರು. 22, 27, 506 ರೈತರು ಇದರ ಫಲಾನುಭವಿಗಳಾಗಿದ್ದರು.
'ಕೊರೊನಾಗಿಂತ ಮೋದಿ, ಬಿಎಸ್‌ವೈ ಡೇಂಜರ್'
ಇವರು ಒಟ್ಟು ಸಾಲ 8 ಸಾವಿರ ಕೋಟಿಯಿತ್ತು. ಆದರೆ ಅದು ಫಲಾನುಭವಿಗಳಿಗೆ ತಲುಪಿದ್ಯಾ ಎಂದು ನೋಡುವುದಾದರೆ ಅಚ್ಚರಿಯಾಗುತ್ತದೆ. ಬಹಳಷ್ಟು ಫಲಾನುಭವಿಗಳಿಗೆ ಇದು ತಲುಪಿಯೇ ಇಲ್ಲ. ರೈತರ ಹೆಸರಿನಲ್ಲಿ ಕೋಟಿ ಕೋಟಿ ಹಣ ಗುಳುಂ ಸ್ವಾಹ ಆಗಿದೆ. ಸುವರ್ಣ ನ್ಯೂಸ್ ಸ್ಟಿಂಗ್ ಆಪರೇಶನ್‌ನಲ್ಲಿ ಇದು ಬಯಲಾಗಿದೆ. ಮಾನ್ಯ ಮುಖ್ಯಮಂತ್ರಿಗಳು, ಮಾಜಿ ಸಿಎಂ ಸಿದ್ದರಾಮಯ್ಯನವರು ಇದನ್ನು ನೋಡಲೇಬೇಕು..!