ಹೈಕಮಾಂಡ್ ಅಂಗಳಕ್ಕೆ ಸಾಹುಕಾರ್ ಸೀಡಿ ಪ್ರಕರಣ; ಪಕ್ಷದಲ್ಲಿಯೂ ಅಸಮಾಧಾನ

ಸಾಹುಕಾರ್ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ಹೈಕಮಾಂಡ್ ಅಂಗಳ ತಲುಪಿದೆ. ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಸಿಡಿ ಪ್ರಕರಣದ ಬಗ್ಗೆ ವರದಿ ನೀಡುವಂತೆ ಹೈಕಮಾಂಡ್  ಸೂಚನೆ ನೀಡಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 03): ಸಾಹುಕಾರ್ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ಹೈಕಮಾಂಡ್ ಅಂಗಳ ತಲುಪಿದೆ. ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಸಿಡಿ ಪ್ರಕರಣದ ಬಗ್ಗೆ ವರದಿ ನೀಡುವಂತೆ ಹೈಕಮಾಂಡ್ ಸೂಚನೆ ನೀಡಿದೆ. 

ವರದಿಯ ಆಧಾರದ ಮೇಲೆ ಜಾರಕಿಹೊಳಿ ಮೇಲೆ ಶಿಸ್ತು ಕ್ರಮಕ್ಕೆ ಹೈಕಮಾಂಡ್ ಮುಂದಾಗುವ ಸಾಧ್ಯತೆ ಇದೆ. ರಾಜ್ಯ ಬಿಜೆಪಿ ಪಾಳಯದಲ್ಲಿಯೂ ಸಾಹುಕಾರ್ ಮೇಲೆ ಅಪಸ್ವರ ಎದ್ದಿದೆ. ಇದು ಪಕ್ಷಕ್ಕೆ ಡ್ಯಾಮೇಜ್ ಮಾಡುವ ಪ್ರಸಂಗ. ಇಂತಹ ಪ್ರಕಣರವನ್ನು ಸಹಿಸಬಾರದು. ರಾಜೀನಾಮೆ ಪಡೆಯುವುದೇ ಉತ್ತಮ ಎನ್ನುವ ಮಾತು ಕೇಳಿ ಬರುತ್ತಿದೆ. 

ರಾಸಲೀಲೆ ವಿಡಿಯೋ ಬಹಿರಂಗ : ನಾನವನಲ್ಲ ಎಂದ ಜನಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ!

Related Video