Asianet Suvarna News

ರಾಸಲೀಲೆ ವಿಡಿಯೋ ಹಿಂದೆ ಬೇರೆಯದೇ ಕಥೆಯಿದೆ, ಜಾರಕಿಹೊಳಿ ಕೇಸ್‌ಗೆ ಟ್ವಿಸ್ಟ್‌ ಕೊಟ್ಟ ಆರೋಪಿಗಳು

Jun 13, 2021, 11:50 AM IST

ಬೆಂಗಳೂರು (ಜೂ. 13): ರಮೇಶ್ ಜಾರಕಿಹೊಳಿ ಸಿಡಿ ಕೇಸ್ ವಿಚಾರವಾಗಿ ಆರೋಪಿಗಳು ಎಸ್‌ಐಟಿ ಮುಂದೆ ಹಾಜರಾಗಿದ್ದಾರೆ. ವಿಚಾರಣೆ ವೇಳೆ ಕೆಲವು ಸ್ಫೋಟಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. 

ಜಾರಕಿಹೊಳಿ ಸಿಡಿ ಪ್ರಕರಣ; ತನಿಖಾಧಿಕಾರಿ ಮುಂದೆ ಹೊಸ ಕತೆ ಹೇಳಿದ ಶಂಕಿತ ಸಿಡಿ ಕಿಂಗ್ ಪಿನ್!

' ವಿಡಿಯೋ ಮಾಡುವುದು ಗೊತ್ತಾಗಿ ಪರ್ವಾಗಿಲ್ಲ ಮಾಡು ಅಂತಾರಂತೆ ಸಾಹುಕಾರ್. ಆ ವಿಡಿಯೋ ಜಾರಕಿಹೊಳಿ ಮೊಬೈಲ್‌ನಲ್ಲಿದೆಯಂತೆ. ವಿಡಿಯೋ ತೋರಿಸಿ ಬೆದರಿಸಿ ಲೈಂಗಿಕ ಸಂಪಕ್ಕ ಬೆಳೆಸಿದ್ದಾರಂತೆ. ಇದೇ ರೀತಿ ಸಾಕಷ್ಟು ಯುವತಿಯರಿಗೆ ಬೆದರಿಸಿ ಸಂಪರ್ಕ ಬೆಳೆಸಿದ್ದಾರಂತೆ. ಈ ವಿಚಾರವನ್ನು ಯುವತಿ ಕಾಲ್ ಮಾಡಿ ನಮಗೆ ತಿಳಿಸಿದಳು. ಹಾಗಾಗಿ ಸ್ಟಿಂಗ್ ಆಪರೇಶನ್‌ಗೆ ಮುಂದಾದೆವು' ಅಂತ ಆರೋಪಿ ಶ್ರವಣ್ ಹೇಳಿದ್ದಾನೆ.