ಹೊಸ ಆಟ ಶುರು ಮಾಡಿದ ಸಾಹುಕಾರ್, ಮಂತ್ರಿ ಸ್ಥಾನ ಮರು ಪಡೆಯಲು ಕಸರತ್ತು..?

- ಆರ್‌ಎಸ್‌ಎಸ್‌ ಮುಖಂಡರ ಮನೆಗೆ ರಮೇಶ ಜಾರಕಿಹೊಳಿ ಭೇಟಿ- ಮಂತ್ರಿ ಸ್ಥಾನ ಮರುಪಡೆಯಲು ಪರೋಕ್ಷವಾಗಿ ಮತ್ತೆ ಒತ್ತಡ ಹಾಕುತ್ತಿದ್ದಾರಾ ರಮೇಶ?- ದೇವೇಂದ್ರ ಫಡ್ನವೀಸ್ ನನ್ನ ಗಾಡ್‌ಫಾದರ್ ಎಂದಿದ್ಧಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 27): ಸೀಡಿ ಹಗರಣದ ಬಳಿಕ ತಣ್ಣಗಾಗಿದ್ದ ರಮೇಶ್ ಜಾರಕಿಹೊಳಿ ಈಗ ರಾಜಕೀಯವಾಗಿ ಸದ್ದು ಮಾಡುತ್ತಿದ್ದಾರೆ. ದಿಢೀರನೇ ಮುಂಬೈಗೆ ಭೇಟಿ ನೀಡಿ 'ಮಹಾ' ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಜೊತೆಗೆ ಆರ್‌ಎಸ್‌ಎಸ್‌ ಮುಖಂಡರನ್ನೂ ಭೇಟಿಯಾಗಿದ್ಧಾರೆ. ಶತಾಯಗತಾಯ ಸಚಿವ ಸ್ಥಾನವನ್ನು ಪಡೆಯಲು ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. 

ನಕಲಿ ಪರೀಕ್ಷೆ ಬರೆದರೆ ಯಾವತ್ತೂ ಪಾಸ್ ಆಗೋಲ್ಲ, ಯೋಗೇಶ್ವರ್‌ಗೆ ರೇಣುಕಾಚಾರ್ಯ ಟಾಂಗ್

ಈ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿರುವ ಜಾರಕಿಹೊಳಿ, ನಾನು ಮುಂಬೈಗೆ ಹೋಗಿದ್ದು ಸತ್ಯ. ನನ್ನ ರಾಜಕೀಯ ಗಾಡ್‌ಫಾದರ್‌ ದೇವೇಂದ್ರ ಫಡ್ನವೀಸ್‌ ಅವರ ಬಳಿ ನನ್ನ ಮನಸ್ಸಿನ ನೋವು ಹೇಳಿಕೊಂಡಿದ್ದೇನೆ' ಎಂದಿದ್ಧಾರೆ. ಹಾಗಾದರೆ ಜಾರಕಿಹೊಳಿ ತೆರೆ ಮರೆಯಲ್ಲಿ ನಡೆಸುತ್ತಿರುವ ಕಸರತ್ತೇನು..? ಇಲ್ಲಿದೆ ನೋಡಿ. 

Related Video