ಸಾಹುಕಾರ್ ರಾಸಲೀಲೆ ಕೇಸ್ : ಸಿಂಗಲ್ ಬೆಡ್ ರೂಂ, ಸೀಡಿ ಲೇಡಿಗಾಗಿ ತಲಾಶ್..!
ರಮೇಶ್ ಜಾರಕಿಹೊಳಿ ಜತೆಗೆ ಇದ್ದಾರೆ ಎನ್ನಲಾದ ಯುವತಿ ಪತ್ತೆಗೆ ಬೆಂಗಳೂರಿನ ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಯುವತಿ ಆರ್.ಟಿ.ನಗರದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದಳು ಎಂಬುದು ತಿಳಿದು ಬಂದಿದೆ.
ಬೆಂಗಳೂರು (ಮಾ. 08): ರಮೇಶ್ ಜಾರಕಿಹೊಳಿ ಜತೆಗೆ ಇದ್ದಾರೆ ಎನ್ನಲಾದ ಯುವತಿ ಪತ್ತೆಗೆ ಬೆಂಗಳೂರಿನ ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಯುವತಿ ಆರ್.ಟಿ.ನಗರದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದಳು ಎಂಬುದು ತಿಳಿದು ಬಂದಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಏಕಾಏಕಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾಳೆ. ಎನ್‌ಜಿಓದಲ್ಲಿ ಕೆಲಸ ಮಾಡುತ್ತಿದ್ದಾಗಿ ಮನೆ ಮಾಲೀಕನ ಬಳಿ ಹೇಳಿಕೊಂಡಿದ್ದಳಂತೆ.
ಕೋಟಿ ಕೋಟಿ ಡೀಲ್.. ದೂರು ವಾಪಸ್ ಪಡೆದ ಗುಟ್ಟು ಹೇಳಿದ ದಿನೇಶ್; ವಿಡಿಯೋ
ಉತ್ತರ ಕರ್ನಾಟಕ ಕೆಲವು ಜಿಲ್ಲೆಗಳಲ್ಲಿನ ಆಕೆಯ ಕುಟುಂಬದ ಸದಸ್ಯರ ಪತ್ತೆಗೆ ಹುಡುಕಾಟ ನಡೆಸಿದ್ದು, ಆಕೆಯನ್ನು ಪತ್ತೆ ಹಚ್ಚಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಯುವತಿ ಸಿಕ್ಕರೆ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ಸಿಗಲಿದೆ.