ರಾಮ ಮಂದಿರಿಂದ ಹೊಟ್ಟೆ ತುಂಬಲ್ಲ, ರಾಜಣ್ಣ ಬಳಿಕ ಸಚಿವ ಶರಣಬಸಪ್ಪ ವಿವಾದ!

ರಾಮ ಮಂದಿರದಿಂದ ಹೊಟ್ಟೆ ತುಂಬಲ್ಲ, ಸಚಿವ ಶರಣಬಸಪ್ಪ ದರ್ಶನಾಪುರ ವಿವಾದ,ರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಗುರುವಾಯೂರು ದೇವಸ್ಥಾನಕ್ಕೆ ಮೋದಿ ಭೇಟಿ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ರಾಮ ಮಂದಿರದಿಂದ ಯಾರ ಹೊಟ್ಟೆ ತುಂಬಲ್ಲ, ರಾಮ ಮಂದಿರದಿಂದ ಯಾರಿಗೂ ಏನೂ ಆಗಲ್ಲ ಎಂದು ಸಚಿವ ಶರಣಬಸಪ್ಪ ದರ್ಶನನಾಪುರ ವಿವಾದಿತ ಹೇಳಿಕೆ ನೀಡಿದ್ದಾರೆ. ಹಲವರು ಸುದೀರ್ಘ ಆಡಳಿತ ಮಾಡಿದ ಕಾಂಗ್ರೆಸ್ ಎನು ಮಾಡಿದೆ ಎಂದು ಕೇಳುತ್ತಾರೆ. ಕಾಂಗ್ರೆಸ್ ಬಡವರಿಗೆ ಬೇಕಾದ ಸೌಲಭ್ಯ ಕಲ್ಪಿಸಿದೆ. ಆಸ್ಪತ್ರೆ, ಶಾಲೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಿದೆ ಎಂದು ದರ್ಶನಾಪುರ್ ಹೇಳಿದ್ದಾರೆ. ಆದರೆ ದರ್ಶನಾಪುರ್ ಹೇಳಿಕೆಗೆ ಬಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ರಾಮ ಮಂದಿರ ನಿರ್ಮಾಣವಾಗಿರುವುದು ಭಕ್ತರ ದೇಣಿಗೆಯಲ್ಲಿ, ಸರ್ಕಾರದ ಹಣದಲಲ್ಲಿ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.

Related Video