ಕಟಾವಾಗಿದ್ದ ಬೆಳೆ ನೀರುಪಾಲು, ತೋಟದಲ್ಲೇ ಕೊಳೆಯುತ್ತಿದೆ ಕಾಫಿ: ರೈತಾಪಿ ವರ್ಗ ಕಂಗಾಲು
ಉತ್ತರ ಕನ್ನಡದಲ್ಲಿ ಕಳೆದ 3 ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಕಟಾವಾಗಿದ್ದ ಬೆಳೆಯೆಲ್ಲಾ ಅಕಾಲಿಕ ಮಳೆಯಿಂದಾಗಿ ನೀರು ಪಾಲಾಗಿದೆ.
ಬೆಂಗಳೂರು (ನ. 16): ಉತ್ತರ ಕನ್ನಡದಲ್ಲಿ (Uttar Kannada) ಕಳೆದ 3 ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಕಟಾವಾಗಿದ್ದ ಬೆಳೆಯೆಲ್ಲಾ ಅಕಾಲಿಕ ಮಳೆಯಿಂದಾಗಿ ನೀರು ಪಾಲಾಗಿದೆ. ಅಂಕೋಲಾ, ಹೊನ್ನಾವರ, ಕುಮಟಾ ಭಾಗದಲ್ಲಿ ಮಳೆ ಭಾರೀ ಪ್ರಮಾಣದಲ್ಲಿ ಅವಾಂತರ ಸೃಷ್ಟಿಸಿದೆ.
Chikkamagalutu: ಮಲೆನಾಡಿನಲ್ಲಿ ಮುಗಿದಿಲ್ಲ ಮಳೆಗಾಲ, ಅಡಿಕೆ ಒಣಗಿಸಲು ಇದೆಂಥಾ ಐಡಿಯಾ ನೋಡಿ..!
ಮಳೆಯಿಂದಾಗಿ ಬೆಳೆಗಳೆಲ್ಲಾ ನಾಶವಾಗಿದೆ. ನಮಗೆ ಸೂಕ್ತ ಪರಿಹಾರ ಕೊಡಿ ಸ್ವಾಮಿ ಎಂದು ರೈತರು ಆಗ್ರಹಿಸಿದ್ದಾರೆ. ಇನ್ನು ಚಿಕ್ಕಮಗಳೂರಿನಲ್ಲಿ ಇನ್ನೇನು ಕಾಫಿ ಬೆಳೆ ಕೈ ಸೇರಬೇಕು ಅನ್ನುವಾಗ, ಮಳೆಯಿಂದಾಗಿ ಕಾಫಿ ನೀರುಪಾಲಾಗಿದೆ. ಕೆಲವೆಡೆ ಅಂಗಳದಲ್ಲಿಯೇ ಕೊಳೆಯುತ್ತಿದೆ.