ಐಟಿ ದಾಳಿಯಲ್ಲಿ ಬಯಲಾಯ್ತು 403 ಕೋಟಿ ವೈದ್ಯ ಸೀಟ್ ದಂಧೆ
ದಕ್ಷಿಣ ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ವ್ಯಕ್ತಿಯೊಬ್ಬರ ಮನೆಯಲ್ಲಿ 40 ಕೆ.ಜಿ.ಗೂ ಅಧಿಕ ಚಿನ್ನ ಪತ್ತೆಯಾಗಿದೆ. ಅಪಾರ ಪ್ರಮಾಣದ ವಜ್ರದ ಹರಳು, ಬೆಳ್ಳಿ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು (ಫೆ. 20): ಕರ್ನಾಟಕ ಮತ್ತು ಕೇರಳದಲ್ಲಿ ಪ್ರತಿಷ್ಠಿತ ಒಂಬತ್ತು ಟ್ರಸ್ಟ್‌ಗಳು ಮುನ್ನಡೆಸುತ್ತಿರುವ ವೈದ್ಯಕೀಯ ಕಾಲೇಜುಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ (ಐಟಿ), ನೂರಾರು ಕೋಟಿ ರುಪಾಯಿ ಅವ್ಯವಹಾರದ ವೈದ್ಯಕೀಯ ಸೀಟು ಬ್ಲಾಕಿಂಗ್ ಜಾಲವನ್ನು ಪತ್ತೆಹಚ್ಚಿದೆ.
ಬೆಂಗಳೂರು ಮತ್ತು ಮಂಗಳೂರಿನಲ್ಲಿರುವ ಕಾಲೇಜಿನ ಟ್ರಸ್ಟಿಗಳು, ಮಾಲಿಕರು, ನಿರ್ದೇಶಕರ ನಿವಾಸ, ಕಚೇರಿ ಸೇರಿದಂತೆ ಒಟ್ಟು 56 ವಿವಿಧ ಸ್ಥಳದಲ್ಲಿ ಈ ದಾಳಿ ನಡೆದಿತ್ತು. ದಾಳಿ ವೇಳೆ ಕೋಟ್ಯಂತರ ರು. ಮೌಲ್ಯದ ಚಿನ್ನಾಭರಣ, ವಿದೇಶಿ ನೆಲದಲ್ಲಿರುವ ಬೇನಾಮಿ ಆಸ್ತಿ, ಶೈಕ್ಷಣಿಕ ಸಂಸ್ಥೆ ಹೆಸರಿನಲ್ಲಿ ಇನ್ನಿತರ ವಾಣಿಜ್ಯ ವ್ಯವಹಾರ ನಡೆಸುತ್ತಿರುವ ಬಗ್ಗೆ ದಾಖಲೆಯನ್ನು ಜಪ್ತಿ ಮಾಡಲಾಗಿದೆ. .30 ಕೋಟಿ ಮೌಲ್ಯದ 81 ಕೆ.ಜಿ ಚಿನ್ನಾಭರಣ, .15.09 ಕೋಟಿ ನಗದು, 50 ಕ್ಯಾರೆಟ್ ವಜ್ರ, 40 ಕೆ.ಜಿ ಬೆಳ್ಳಿ, ಘಾನಾ ದೇಶದಲ್ಲಿ . 2.39 ಕೋಟಿ ಬೇನಾಮಿ ಆಸ್ತಿ ಪತ್ತೆಯಾಗಿದೆ.
ಟೊಯೊಟಾ ಕಾರ್ಮಿಕರ ಪ್ರತಿಭಟನೆ: ಕವರ್ ಸ್ಟೋರಿಯಲ್ಲಿ ಬಯಲಾಯ್ತು ಎಕ್ಸ್‌ಕ್ಲೂಸಿವ್ ವಿಚಾರ