Asianet Suvarna News Asianet Suvarna News

Rahul Gandhi Disqualified: ಹೈಕೋರ್ಟ್‌ಗೆ ಮೇಲ್ಮನವಿ ಮಾಡೋ ಮುನ್ನವೇ ಈ ಕ್ರಮ ಎಷ್ಟು ಸರಿ?

ಜನಪ್ರತಿನಿಧಿ ಕಾಯ್ದೆ 1951ರ ಪ್ರಕಾರ ರಾಹುಲ್ ಗಾಂಧಿಯವರನ್ನು ವಯನಾಡು ಸಂಸದ ಸ್ಥಾನದಿಂದ ಅನರ್ಹ ಮಾಡಲಾಗಿದೆ. ಹೈಕೋರ್ಟ್‌ಗೆ ಮೇಲ್ಮನವಿ ಮಾಡೋ ಮುನ್ನವೇ ಈ ಕ್ರಮ ಎಷ್ಟು ಸರಿ?


ಬೆಂಗಳೂರು (ಮಾ.24): ತಮಗೆ ಕೋರ್ಟ್‌ ವಿಧಿಸಿರುವ ಶಿಕ್ಷೆಯ ಕುರಿತಾಗಿ ರಾಹುಲ್‌ ಗಾಂಧಿಗೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ಇತ್ತು. ಅದಕ್ಕೂ ಮುನ್ನವೇ ಲೋಕಸಭಾ ಕಾರ್ಯಾಲಯ ಅವರನ್ನು ಅನರ್ಹ ಮಾಡಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆಯೇ ವ್ಯಕ್ತವಾಗಿದೆ.

ಇದು ಆಶ್ಚರ್ಯ ಅನಿಸೋದಿಲ್ಲ. ಲೋಕಸಭೆ ಕಾರ್ಯಾಲಯಕ್ಕೆ ಈಗಾಗಲೇ ರಾಹುಲ್‌ ಗಾಂಧಿಗೆ ಶಿಕ್ಷೆ ಆಗಿರುವುದು ತಿಳಿದಿದೆ. ಎಂದಿನ ಕಾನೂನಿನ ಅನ್ವಯ ಅವರು ಕ್ರಮ ತೆಗೆದುಕೊಂಡಿದ್ದಾರೆ. 2013ರ ತೀರ್ಪಿನ ಅನ್ವಯ ಜನಪ್ರತಿನಿಧಿಗೆ ಶಿಕ್ಷೆ ಆದ ಕೂಡಲೇ ಅವರ ಸದಸ್ಯತ್ವ ಅನರ್ಹಗೊಳ್ಳುತ್ತದೆ ಎಂದು ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಕೆವಿ ಧನಂಜಯ್‌ ತಿಳಿಸಿದ್ದಾರೆ.

ಮೋದಿ ನೆನಪಿರಲಿ, ನನ್ನ ಕುಟುಂಬ ಭಾರತದ ಪ್ರಜಾಪ್ರಭುತ್ವಕ್ಕೆ ನೀರಲ್ಲ, ರಕ್ತ ಹಾಕಿ ಬೆಳೆಸಿದೆ: ಪ್ರಿಯಾಂಕಾ ವಾದ್ರಾ!

ಈ ವಿಚಾರದಲ್ಲಿ ಲೋಕಸಭೆಯ ಕಾರ್ಯಾಲಯ ಮಾಡಿರುವುದು ತಮ್ಮ ಕೆಲಸ ಅಷ್ಟೇ. ರಾಹುಲ್‌ ಗಾಂಧಿಗೆ ಈಗಲೂ ಕೂಡ ಹೈಕೋರ್ಟ್‌ಗೆ ಹೋಗಿ ತಮ್ಮ ವಿರುದ್ಧ ತೀರ್ಪಿಗೆ ತಡೆಯಾಜ್ಞೆ ತರುವ ಅವಕಾಶ ಇದೆ ಎಂದು ಹೇಳಿದ್ದಾರೆ.

Video Top Stories