Asianet Suvarna News Asianet Suvarna News

PSI Scam: ಆರೋಪಿಗಳ ವಿಚಾರಣೆಯಲ್ಲಿ ಬಯಲಾಯ್ತು ಅಭ್ಯರ್ಥಿಗಳ ಡೀಲ್ ರೇಟ್ ಪುರಾಣ!

ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ (PSI Recruitment Scam) ಬಗ್ಗೆ ಒಂದೊಂದೇ ಹೊಸ ವಿಚಾರಗಳು ಬಯಲಿಗೆ ಬರುತ್ತಲೇ ಇದೆ. ಸಿಐಡಿ (CID) ವಶದಲ್ಲಿರುವ ಬ್ರೋಕರ್‌ಗಳಾದ ಶರತ್ ಹಾಗೂ ಮಂಜುನಾಥ್ ವಿಚಾರಣೆ ವೇಳೆ ಅಭ್ಯರ್ಥಿಗಳ ಜೊತೆ ಡೀಲ್ ಯಾವ ರೀತಿ ನಡೆಯುತ್ತಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. 
 

ಬೆಂಗಳೂರು (ಮೇ. 12): ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ (PSI Recruitment Scam) ಬಗ್ಗೆ ಒಂದೊಂದೇ ಹೊಸ ವಿಚಾರಗಳು ಬಯಲಿಗೆ ಬರುತ್ತಲೇ ಇದೆ. ಸಿಐಡಿ (CID) ವಶದಲ್ಲಿರುವ ಬ್ರೋಕರ್‌ಗಳಾದ ಶರತ್ ಹಾಗೂ ಮಂಜುನಾಥ್ ವಿಚಾರಣೆ ವೇಳೆ ಅಭ್ಯರ್ಥಿಗಳ ಜೊತೆ ಡೀಲ್ ಯಾವ ರೀತಿ ನಡೆಯುತ್ತಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. 

ಮೊದಲು ಅಭ್ಯರ್ಥಿಗಳನ್ನು ಈ ಬ್ರೋಕರ್‌ಗಳು ಹುಡುಕುತ್ತಿದ್ದರು. ಡೀಲಿಂಗ್ ಬಗ್ಗೆ 3 ಆಪ್ಷನ್ ಕೊಡುತ್ತಿದ್ರು. ಆ ನಂತರ ಡೀಲಿಂಗ್ ಕುದುರಿಸಲಾಗುತ್ತದೆ. ಒಂದೊಂದು ಅಕ್ರಮಕ್ಕೆ ಒಂದೊಂದು ರೇಟ್ ನಿಗದಿಪಡಿಸಲಾಗಿದೆ. ಒಎಂಆರ್‌ ತಿದ್ದುಪಡಿಗೆ 80 ಲಕ್ಷ, ಅಡ್ವಾನ್ಸ್ 40 ಲಕ್ಷ, ಆಮೇಲೆ 40 ಲಕ್ಷ, ಬ್ಲೂಟೂತ್‌ನಲ್ಲಿ ಉತ್ತರಕ್ಕೆ 60 ಲಕ್ಷ, ಅಡ್ವಾನ್ಸ್ 30 ಲಕ್ಷ, ಮೇಲ್ವಿಚಾರಕರ ಬುಕಿಂಗ್‌ಗೆ 50 ಲಕ್ಷ ಕೊಡಬೇಕಿತ್ತು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. 

Video Top Stories