Asianet Suvarna News Asianet Suvarna News

ಆರಗ ಗೃಹ ಸಚಿವರಾಗಿ ಮುಂದುವರೆಯಲು ನಾಲಾಯಕ್, ವಜಾಗೊಳಿಸಿ: ಸಿದ್ದರಾಮಯ್ಯ

ಗೃಹ ಸಚಿವರು ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ನೊಂದ ಅಭ್ಯರ್ಥಿಗಳು ಅಕ್ರಮ ನಡೆದಿದೆ ಎಂದು ಪತ್ರ ಬರೆದರೂ ಕ್ರಮ ತೆಗೆದುಕೊಂಡಿಲ್ಲ: ಸಿದ್ದರಾಮಯ್ಯ

First Published May 4, 2022, 3:51 PM IST | Last Updated May 4, 2022, 3:51 PM IST

ಬೆಂಗಳೂರು (ಮೇ. 04): 'ಗೃಹ ಸಚಿವ ಆರಗ ಜ್ಞಾನೇಂದ್ರ PSI ಹಗರಣ ಅಕ್ರಮದ ಹೊಣೆ ಹೊರಬೇಕು. ಗೃಹ ಸಚಿವರು ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ನೊಂದ ಅಭ್ಯರ್ಥಿಗಳು ಅಕ್ರಮ ನಡೆದಿದೆ ಎಂದು ಪತ್ರ ಬರೆದರೂ ಕ್ರಮ ತೆಗೆದುಕೊಂಡಿಲ್ಲ. ಫೆ. 03 ಕ್ಕೆ ಸಚಿವ ಪ್ರಭು ಚವ್ಹಾಣ್ ಸಹ ಅಕ್ರಮದ ಬಗ್ಗೆ ಸಿಎಂಗೆ ಪತ್ರ ಬರೆದಿದ್ದರು. ಪಿಎಸ್‌ಐ ಆಯ್ಕೆ ಪಟ್ಟಿ ತಡೆಹಿಡಿಯಬೇಕೆಂದು ಮನವಿ ಮಾಡಿದ್ದರು. ಶಾಸಕ ಸಂಕನೂರ ಸಹ ಅಕ್ರಮದ ತನಿಖೆಗೆ ಪತ್ರ ಬರೆದಿದ್ದರು. ಇಷ್ಟೆಲ್ಲಾ ಹೇಳಿದರೂ ಗೃಹ ಸಚಿವರು ಮಾತ್ರ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಇವರು ಮಂತ್ರಿಯಾಗೋಕೆ ನಾಲಾಯಕ್. ಇವರನ್ನು ಕೂಡಲೇ ವಜಾಗೊಳಿಸಬೇಕು' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. 

PSI Scam: ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಸೋರಿಕೆಯಾಗಿದೆ ಎಂದ ಎಚ್‌ಡಿಕೆ

 


 

Video Top Stories