PSI Scam: ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಸೋರಿಕೆಯಾಗಿದೆ ಎಂದ ಎಚ್‌ಡಿಕೆ
PSI ಹಗರಣದ ಬಗ್ಗೆ ಎಚ್ ಡಿ ಕುಮಾರಸ್ವಾಮಿ (HD Kumaraswamy) ಹೊಸ ಬಾಂಬ್ ಸಿಡಿಸಿದ್ದಾರೆ. ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಸೋರಿಕೆಯಾಗಿದೆ. ಜೆಜೆ ನಗರ ಗಲಭೆಯಲ್ಲಿ ಕಮಲ್ ಪಂಥ್ ಮೇಲೆ ಬಿಜೆಪಿ ಆರೋಪ ಮಾಡಿತ್ತು. ಅವರ ಕೆಲ ಅಭಿಮಾನಿಗಳು ಈ ಸರ್ಕಾರಕ್ಕೆ ಬುದ್ಧಿ ಕಲಿಸಬೇಕು ಎಂದು ಮಾಹಿತಿ ಸೋರಿಕೆ ಮಾಡಿದ್ದಾರೆ' ಎಂದು ಕುಮಾರಣ್ಣ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರು (ಮೇ. 04): PSI ಹಗರಣದ ಬಗ್ಗೆ ಎಚ್ ಡಿ ಕುಮಾರಸ್ವಾಮಿ (HD Kumaraswamy) ಹೊಸ ಬಾಂಬ್ ಸಿಡಿಸಿದ್ದಾರೆ. ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಸೋರಿಕೆಯಾಗಿದೆ. ಜೆಜೆ ನಗರ ಗಲಭೆಯಲ್ಲಿ ಕಮಲ್ ಪಂಥ್ ಮೇಲೆ ಬಿಜೆಪಿ ಆರೋಪ ಮಾಡಿತ್ತು. ಅವರ ಕೆಲ ಅಭಿಮಾನಿಗಳು ಈ ಸರ್ಕಾರಕ್ಕೆ ಬುದ್ಧಿ ಕಲಿಸಬೇಕು ಎಂದು ಮಾಹಿತಿ ಸೋರಿಕೆ ಮಾಡಿದ್ದಾರೆ' ಎಂದು ಕುಮಾರಣ್ಣ ಬಾಂಬ್ ಸಿಡಿಸಿದ್ದಾರೆ.
ಬ್ಲೂಟೂತ್‌ಗೆ ಕೆಮ್ಮುವುದನ್ನೇ ಸಂಕೇತ ಬಾಷೆಯಾಗಿ ಬಳಸಿರೋ ಗುಟ್ಟನ್ನ ಕೆಲ ದಿನಗಳ ಹಿಂದೆ ಬಿಚ್ಚಿಟ್ಟಿದ್ದ ಅಕ್ರಮ ಎಸಗಿರುವ ಅಭ್ಯರ್ಥಿಗಳು ಇದೀಗ ಪರೀಕ್ಷೆಗೂ ಮುನ್ನಾ ದಿನವೇ ಬ್ಲೂಟೂತ್ ಡಿವೈಸ್‌ನ್ನು ಪರೀಕ್ಷೆ ಕೇಂದ್ರದಲ್ಲಿ ಬಚ್ಚಿಟ್ಟಿದ್ದಾಗಿ ಹೇಳುವ ಮೂಲಕ ಗಮನ ಸೆಳೆದಿದ್ದಾರೆ. ಪರೀಕ್ಷೆಯ ಮುನ್ನಾದಿನವೇ ಕೇಂದ್ರದೊಳಗಿರುವ ಫ್ಲಾವರ್ ಪಾಟ್‌ನಲ್ಲಿ ಬ್ಲೂಟೂತ್ ಡಿವೈಸ್ ಬಚ್ಚಿಟ್ಟಿದ್ದೆ ಎಂದು ಇದೀಗ ಪೊಲೀಸ್ ವಶದಲ್ಲಿರುವ ರಾಜಾಪುರದ ಪ್ರಭು ಶರಣಪ್ಪ ಬಾಯಿ ಬಿಟ್ಟಿದ್ದಾನೆ.