PSI Recruitment Scam ಸಿಸಿಟಿವಿ ಮಾಹಿತಿ ಕೊಡದೇ ಶಾಲಾ ಮೇಲ್ವಿಚಾರಕರು ಎಸ್ಕೇಪ್!
ಪಿಎಸ್‌ಐ ನೇಮಕಾತಿಯ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಸಿಐಡಿ ಪೊಲೀಸರು ಸೋಮವಾರ ಕೂಡ ಶಾಲೆಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಕಲಬುರಗಿ (ಏ.18): ಪಿಎಸ್‌ಐ ನೇಮಕಾತಿಯ (PSI Recruitment ) ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಸಿಐಡಿ (CID) ಪೊಲೀಸರು ಈವರೆಗೆ ನಾಲ್ವರು ಅಭ್ಯರ್ಥಿಗಳು ಮತ್ತು ಮೂವರು ಪರೀಕ್ಷಾ ಮೇಲ್ವಿಚಾರಕಿಯರನ್ನು ಬಂಧಿಸಿದ್ದಾರೆ. ಭಾನುವಾರ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ (divya hagargi) ಮನೆ ಮೇಲೆ ದಾಳಿ ನಡೆಸಿದ್ದರು. ಜೊತೆಗೆ ಪಿಎಸ್‌ಐ ನೇಮಕ ಪರೀಕ್ಷೆ ನಡೆದಿದ್ದ ದಿವ್ಯಾ ಹಾಗರಗಿಗೆ ಸೇರಿದ ಜ್ಞಾನಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ (Jnanjyothi English Medium school) ಕೂಡ ಶೋಧ ನಡೆಸಿದ್ದರು.
545 PSI ಹುದ್ದೆ ನೇಮಕಾತಿಯಲ್ಲಿ ಆಕ್ರಮ ಪ್ರಕರಣ: ಮಹತ್ವದ ಹೇಳಿಕೆ ಕೊಟ್ಟ ಡಿಜಿ ಐಜಿಪಿ
ಸೋಮವಾರ ಕೂಡ ಮತ್ತೆ ಶಾಲೆಗೆ ದಾಳಿ ನಡೆಸಿದ ಸಿಐಡಿ ತಂಡ ಮುಖ್ಯಶಿಕ್ಷಕರ ಕೊಠಡಿ, ಪರೀಕ್ಷೆ ನಡೆದಿದ್ದ ಕೊಠಡಿಯಲ್ಲಿ ಕೂಡ ತಡಕಾಡಿದರು. ಬಳಿಕ ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ದಿವ್ಯಾ ಮನೆಯಿಂದ ನಾಪತ್ತೆಯಾಗಿದ್ದು, ಮೊಬೈಲ್ ಸ್ವಿಚ್ ಆಫ್ ಆಗಿದೆ. ಆಕೆಯ ಪತಿ ರಾಜೇಶ್ ರನ್ನು ಬಂಧಿಸಲಾಗಿದ್ದು, ದಿವ್ಯಾ ಹಾಗರಗಿ ವಿಜಯಪುರಕ್ಕೆ ಹೋಗಿದ್ದಾರೆ ಎಂದು ಪತಿ ಮಾಹಿತಿ ನೀಡಿದ್ದರು. ಆದರೆ ಪತಿ ಹೇಳಿರುವ ಮಾಹಿತಿ ಸುಳ್ಳೆಂದು ಸಿಐಡಿ ಹೇಳಿದೆ.