ಬೆನ್ಸನ್ ಟೌನ್ ಪ್ರಾಪರ್ಟಿ ಡೀಲ್: ನಿಜಾಮುದ್ದೀನ್ ಹೇಳಿಕೆಯಿಂದ ಜಮೀರ್‌ಗೆ ಸಂಕಷ್ಟ..?
ಶಾಸಕ ಜಮೀರ್ ಅಹ್ಮದ್ ನಿವಾಸದ ಮೇಲೆ ನಡೆದ ಇಡಿ ದಾಳಿಯಲ್ಲಿ ಕೆಲವೊಂದು ಮಾಹಿತಿ ಬಯಲಾಗಿದೆ. 9 ಕೋಟಿಗೆ ಬೆನ್ಸನ್ ಟೌನ್ ಪ್ರಾಪರ್ಟಿಯನ್ನು ಖರೀದಿ ಮಾಡಿರುವುದಾಗಿ ಜಮೀರ್ ಹೇಳಿದ್ದಾರೆ.
ಬೆಂಗಳೂರು (ಆ. 09): ಶಾಸಕ ಜಮೀರ್ ಅಹ್ಮದ್ ನಿವಾಸದ ಮೇಲೆ ನಡೆದ ಇಡಿ ದಾಳಿಯಲ್ಲಿ ಕೆಲವೊಂದು ಮಾಹಿತಿ ಬಯಲಾಗಿದೆ. 9 ಕೋಟಿಗೆ ಬೆನ್ಸನ್ ಟೌನ್ ಪ್ರಾಪರ್ಟಿಯನ್ನು ಖರೀದಿ ಮಾಡಿರುವುದಾಗಿ ಜಮೀರ್ ಹೇಳಿದ್ದಾರೆ. ಆದರೆ 25 ಕೋಟಿ ಕೊಟ್ಟಿದ್ದಾರೆಂದು ಐಎಂಎ ಆರೋಪಿ ನಿಜಾಮುದ್ದೀನ್ ಸಿಬಿಐ ಮುಂದೆ ಹೇಳಿದ್ದರು. ಇಷ್ಟೇ ಅಲ್ಲ, ಜಮೀರ್ ಹಾಗೂ ಮನ್ಸೂರ್ ಖಾನ್ ನಡುವೆ ನಡೆದ ವ್ಯವಹಾರ ವೈಟ್‌ನಲ್ಲಿ ನಡೆದಿಲ್ಲ ಎಂದು ಹೇಳಲಾಗುತ್ತಿದ್ದು, ತನಿಖೆ ಮುಂದುವರೆದಿದೆ.
90 ಕೋಟಿಯ ಜಾಗ, 9 ಕೋಟಿಗೆ ಮಾರಾಟ ಮಾಡಿ ಇಡಿ ಸುಳಿಯಲ್ಲಿ ತಗಲಾಕ್ಕೊಂಡ್ರಾ ಜಮೀರ್ ಅಹ್ಮದ್..?