90 ಕೋಟಿಯ ಜಾಗ, 9 ಕೋಟಿಗೆ ಮಾರಾಟ ಮಾಡಿ ಇಡಿ ಸುಳಿಯಲ್ಲಿ ತಗಲಾಕ್ಕೊಂಡ್ರಾ ಜಮೀರ್ ಅಹ್ಮದ್..?

ರಿಚ್‌ಮಂಡ್ ಟೌನ್‌ನಲ್ಲಿರುವ ಜಾಗವನ್ನು ಐಎಂಎ ಮಾಲಿಕ ಮನ್ಸೂರ್ ಅಲಿ ಖಾನ್‌ಗೆ ಕಡಿಮೆ ಬೆಲೆಗೆ ಮಾರಾಟ ಮಾಡಿರುವುದೇ ಜಮೀರ್‌ ಇಡಿ ಸುಳಿಯಲ್ಲಿ ಸಿಲುಕಲು ಕಾರಣವಾಯಿತು ಎನ್ನಲಾಗಿದೆ. 

First Published Aug 6, 2021, 10:24 AM IST | Last Updated Aug 6, 2021, 10:31 AM IST

ಬೆಂಗಳೂರು (ಆ. 06): ರಿಚ್‌ಮಂಡ್ ಟೌನ್‌ನಲ್ಲಿರುವ ಜಾಗವನ್ನು ಐಎಂಎ ಮಾಲಿಕ ಮನ್ಸೂರ್ ಅಲಿ ಖಾನ್‌ಗೆ ಕಡಿಮೆ ಬೆಲೆಗೆ ಮಾರಾಟ ಮಾಡಿರುವುದೇ ಜಮೀರ್‌ ಇಡಿ ಸುಳಿಯಲ್ಲಿ ಸಿಲುಕಲು ಕಾರಣವಾಯಿತು ಎನ್ನಲಾಗಿದೆ. ಸರ್ಕಾರದ ಬೊಕ್ಕಸಕ್ಕೆ 80 ಕೋಟಿ ರೂಗಿಂತ ಹೆಚ್ಚು ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ. 

ಜಮೀರ್ ಮೇಲೆ 'ಆಕ್ರಮಣ': ಇ.ಡಿ ದಾಳಿಯ ಹಿಂದಿನ ಕಾರಣ ಮತ್ತು ರಾಜಕಾರಣ

ರಿಚ್‌ಮಂಡ್ ಟೌನ್‌ ಬಳಿಕ 19,984 ಚದರಡಿ ವಿಸ್ತೀರ್ಣದ ಜಾಗವನ್ನು ಜಮೀರ್, ಮನ್ಸೂರ್‌ಗೆ ಮಾರಾಟ ಮಾಡಿದ್ದರು.  90 ಕೋಟಿಗೂ ಹೆಚ್ಚಿನ ಮೌಲ್ಯದ ಜಮೀನನ್ನು 9 ಕೋಟಿಗೆ ಮಾರಾಟ ಮಾಡಿರುವುದು ಯಾವ ಕಾರಣಕ್ಕಾಗಿ ಎಂಬ ಅನುಮಾನ ಮೂಡಿದೆ. ಇಡಿ ದಾಳಿ, ಜಮೀರ್ ಆಸ್ತಿಯ ವಿವರ ಎಲ್ಲದರ ಬಗ್ಗೆ ಒಂದು ವರದಿ ಇಲ್ಲಿದೆ.