Asianet Suvarna News Asianet Suvarna News

ಯುಪಿ, ಎಂಪಿ.. ಹರ್ಯಾಣ ಬಳಿಕ ಕರ್ನಾಟಕದಲ್ಲೂ ಲವ್ ಜಿಹಾದ್‌ ನಿಯಂತ್ರಣಕ್ಕೆ ಸಿದ್ಧತೆ?

ಲವ್ ಜಿಹಾದ್‌ಗೆ ನಿಯಂತ್ರಣ ಹೇರುವ ಕಾಯ್ದೆಯನ್ನು ಕರ್ನಾಟಕದಲ್ಲಿಯೂ ಜಾರಿಗೊಳಿಸಬೇಕು ಎಂದು ಸಾರ್ವಜನಿಕ ವಲಯದಿಂದ ಒತ್ತಡ ಕೇಳಿ ಬರುತ್ತಿದೆ. ಕೇಸರಿ ಪಾಳಯದಲ್ಲಿ, ಹಿಂದೂ ಪರ ಸಂಘಟನೆಗಳಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿದೆ. 
 

Nov 24, 2020, 9:43 AM IST

ಬೆಂಗಳೂರು (ನ. 24): ಲವ್ ಜಿಹಾದ್‌ಗೆ ನಿಯಂತ್ರಣ ಹೇರುವ ಕಾಯ್ದೆಯನ್ನು ಕರ್ನಾಟಕದಲ್ಲಿಯೂ ಜಾರಿಗೊಳಿಸಬೇಕು ಎಂದು ಸಾರ್ವಜನಿಕ ವಲಯದಿಂದ ಒತ್ತಡ ಕೇಳಿ ಬರುತ್ತಿದೆ. ಕೇಸರಿ ಪಾಳಯದಲ್ಲಿ, ಹಿಂದೂ ಪರ ಸಂಘಟನೆಗಳಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿದೆ. 

ಪ್ರೀತಿಯ ಹೆಸರಲ್ಲಿ ಮತಾಂತರ ಮಾಡುವ ಲವ್‌ ಜಿಹಾದ್‌ಗೆ ನಿಯಂತ್ರಣ ಹೇರಬೇಕು. ನಿಷೇಧ ಮಾಡುವ ಸಂಬಂಧ ಪಕ್ಷದ ಕೋರ್‌ ಕಮಿಟಿ ಸಹ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಕಠಿಣವಾದ ಕಾಯ್ದೆ ಜಾರಿಗೊಳಿಸಬೇಕು ಎಂದು ಸಿಟಿ ರವಿ ಹೇಳಿದ್ದಾರೆ. 

ಜೈಲಿನಲ್ಲೇ ಆ ರಾಜಕಾರಣಿಯ ದರ್ಬಾರ್... ಸ್ಮಾರ್ಟ್‌ ಫೋನು ಮತ್ತೊಂದು!

ಪ್ರೀತಿಸುವಾಗ ಧರ್ಮ ಅಡ್ಡ ಬರುವುದಿಲ್ಲ. ಮದುವೆಯಾಗಬೇಕಾದರೆ ಧರ್ಮ ಯಾಕೆ ಅಡ್ಡ ಬರುತ್ತದೆ? ಮತಾಂತರ ಮಾಡುವುದೇ ಇವರ ಮೂಲ ಉದ್ದೇಶ ಎಂದು ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.