ದುಬಾರಿ ಹಣ ವಸೂಲಿ ಮಾಡಿದರೆ ಪರ್ಮಿಟ್ ರದ್ದು: ಖಾಸಗಿ ಬಸ್ ಮಾಲೀಕರಿಗೆ ಶ್ರೀರಾಮುಲು ಎಚ್ಚರಿಕೆ
ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದರೆ ಪರ್ಮಿಟ್ ರದ್ದು ಮಾಡುತ್ತೇವೆ ಎಂದು ಖಾಸಗಿ ಬಸ್ ಮಾಲೀಕರಿಗೆ ಸಾರಿಗೆ ಇಲಾಖೆ ಸಚಿವ ಬಿ. ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ಬಸ್‌ಗಳು ದೀಪಾವಳಿ ಹಬ್ಬವನ್ನು ಬಂಡವಾಳ ಮಾಡಿಕೊಂಡಿದ್ದು, ಸಿಕ್ಕಾಪಟ್ಟೆ ಬಸ್ ದರ ಏರಿಕೆ ಮಾಡಿವೆ. ಖಾಸಗಿ ಬಸ್ ದರ ವಿಮಾನದಷ್ಟೇ ದುಬಾರಿಯಾಗಿದ್ದು, ಬೆಂಗಳೂರಿನಿಂದ ಹುಬ್ಬಳ್ಳಿಗೆ 5೦೦೦ ದರ ಹೆಚ್ಚಿಸಲಾಗಿದೆ. ಶುಕ್ರವಾರದಿಂದಲೇ ಸಾಕಷ್ಟು ಜನರು ಊರಿಗೆ ಹೋಗುತ್ತಿದ್ದು, ದರ ಹೆಚ್ಚು ಮಾಡಿದ ಬಸ್’ಗಳ ಪರ್ಮಿಟ್ ಕ್ಯಾನ್ಸಲ್ ಮಾಡುತ್ತೇವೆ ಎಂದು ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ. ದರ ಹೆಚ್ಚಳದ ಬಗ್ಗೆ ಟಾಸ್ಕ್ ಪೋರ್ಸ್ ರಚನೆ ಮಾಡಲಾಗುತ್ತದೆ. ಚೆಕ್ ಪೋಸ್ಟ್’ಗಳನ್ನು ಹೆಚ್ಚಿಸಿ ಖಾಸಗಿ ಬಸ್ ಪರಿಶೀಲನೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.