District Incharge: ಪಟ್ಟಿ ಬದಲಾವಣೆಗೆ ಹೆಚ್ಚಿದ ಒತ್ತಡ, ಸಾಧ್ಯವೇ ಇಲ್ಲ ಎಂದ ಸಿಎಂ

 ಜಿಲ್ಲಾ ಉಸ್ತುವಾರಿ (District Incharge) ಸಚಿವರ ಪಟ್ಟಿ ಪ್ರಕಟ ಬೆನ್ನಲ್ಲೇ, ಸಚಿವರ ಅಸಮಾಧಾನ ಹೊರ ಹಾಕಿದ್ದಾರೆ. ತವರು ಜಿಲ್ಲೆಯ ಉಸ್ತುವಾರಿ ನೀಡುವಂತೆ ಸಚಿವರು ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ. 

First Published Jan 25, 2022, 3:48 PM IST | Last Updated Jan 25, 2022, 5:53 PM IST

ಬೆಂಗಳೂರು (ಜ. 25): ಜಿಲ್ಲಾ ಉಸ್ತುವಾರಿ (District Incharge) ಸಚಿವರ ಪಟ್ಟಿ ಪ್ರಕಟ ಬೆನ್ನಲ್ಲೇ, ಸಚಿವರ ಅಸಮಾಧಾನ ಹೊರ ಹಾಕಿದ್ದಾರೆ. ತವರು ಜಿಲ್ಲೆಯ ಉಸ್ತುವಾರಿ ನೀಡುವಂತೆ ಸಚಿವರು ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸಚಿವರಾದ ನಾರಾಯಣ ಗೌಡ, ಕೆ ಎಸ್ ಈಶ್ವರಪ್ಪ, ಶಿವರಾಂ ಹೆಬ್ಬಾರ್, ಪ್ರಭು ಚವ್ಹಾಣ್ ಸೇರಿದಂತೆ ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ. ಉಸ್ತುವಾರಿ ಪಟ್ಟಿ ಬದಲಾವಣೆ ಸಾಧ್ಯವೇ ಇಲ್ಲ ಎಂದು ಸಿಎಂ ಸ್ಪಷ್ಟ ಸಂದೇಶ ನೀಡಿದ್ದಾರೆ. 

ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅಸ್ತಿತಕ್ಕೆ ಬಂದು ಆರು ತಿಂಗಳು ಸಮೀಪಿಸುತ್ತಿರುವ ವೇಳೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಆದೇಶ ಹೊರಬಿದ್ದಿದ್ದು, ಎಲ್ಲ ಸಚಿವರಿಗೂ ತವರು ಜಿಲ್ಲೆ ಹೊರತುಪಡಿಸಿ ಬೇರೆ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ.

District In-Charge: ಬೇರೆ ಜಿಲ್ಲೆಗಳಿಗೆ ಹೋಗಿ ಕೆಟ್ಟ ಹೆಸರು ಪಡೆಯುವ ಆಸೆ ಇಲ್ಲ: ಮಾಧುಸ್ವಾಮಿ

'ಬೇರೆ ಜಿಲ್ಲೆಯಲ್ಲಿ ಕೆಲಸ ಮಾಡೋದು ಅಸಾಧ್ಯ. ತುಮಕೂರು ಜಿಲ್ಲೆ (Tumakur) ಸಿಕ್ಕಿದ್ದರೆ ಚೆನ್ನಾಗಿ ಕೆಲಸ ಮಾಡಬಹುದಿತ್ತು. ತುಮಕೂರು ಜಿಲ್ಲೆಯ ಆಳ - ಅಗಲ ಚೆನ್ನಾಗಿ ಗೊತ್ತಿದೆ. ಒಳ್ಳೆಯ ಕೆಲಸ ಮಾಡಿ ಹೆಸರು ಪಡೆಯುವ ನಿರೀಕ್ಷೆ ಇತ್ತು. ಬೇರೆ ಜಿಲ್ಲೆಗೆ ಹೋಗಿ ಕೆಟ್ಟ ಹೆಸರು ಪಡೆಯುವ ಆಸೆಯಿಲ್ಲ ಎಂದು ಉಸ್ತುವಾರಿ ಕೈತಪ್ಪಿದ್ದಕ್ಕೆ ಸಚಿವ ಮಾಧುಸ್ವಾಮಿ (Madhuswamy) ಅಸಮಾಧಾನ ವ್ಯಕ್ತಪಡಿಸಿದ್ಧಾರೆ.