District In-charge: ಬೇರೆ ಜಿಲ್ಲೆಗಳಿಗೆ ಹೋಗಿ ಕೆಟ್ಟ ಹೆಸರು ಪಡೆಯುವ ಆಸೆ ಇಲ್ಲ: ಮಾಧುಸ್ವಾಮಿ
'ಬೇರೆ ಜಿಲ್ಲೆಯಲ್ಲಿ ಕೆಲಸ ಮಾಡೋದು ಅಸಾಧ್ಯ. ತುಮಕೂರು ಜಿಲ್ಲೆ (Tumakur) ಸಿಕ್ಕಿದ್ದರೆ ಚೆನ್ನಾಗಿ ಕೆಲಸ ಮಾಡಬಹುದಿತ್ತು. ತುಮಕೂರು ಜಿಲ್ಲೆಯ ಆಳ - ಅಗಲ ಚೆನ್ನಾಗಿ ಗೊತ್ತಿದೆ. ಒಳ್ಳೆಯ ಕೆಲಸ ಮಾಡಿ ಹೆಸರು ಪಡೆಯುವ ನಿರೀಕ್ಷೆ ಇತ್ತು. ಬೇರೆ ಜಿಲ್ಲೆಗೆ ಹೋಗಿ ಕೆಟ್ಟ ಹೆಸರು ಪಡೆಯುವ ಆಸೆಯಿಲ್ಲ ಎಂದು ಉಸ್ತುವಾರಿ ಕೈತಪ್ಪಿದ್ದಕ್ಕೆ ಸಚಿವ ಮಾಧುಸ್ವಾಮಿ (Madhuswamy) ಅಸಮಾಧಾನ ವ್ಯಕ್ತಪಡಿಸಿದ್ಧಾರೆ.
ಬೆಂಗಳೂರು (ಜ. 25): ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದ ಸರ್ಕಾರ ಅಸ್ತಿತಕ್ಕೆ ಬಂದು ಆರು ತಿಂಗಳು ಸಮೀಪಿಸುತ್ತಿರುವ ವೇಳೆ ಜಿಲ್ಲಾ ಉಸ್ತುವಾರಿ (District Incharge) ಸಚಿವರ ನೇಮಕ ಆದೇಶ ಹೊರಬಿದ್ದಿದ್ದು, ಎಲ್ಲ ಸಚಿವರಿಗೂ ತವರು ಜಿಲ್ಲೆ ಹೊರತುಪಡಿಸಿ ಬೇರೆ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ.
District In-Charge: ಬೆಂಗಳೂರು ಗ್ರಾಮಾಂತರ ಉಸ್ತುವಾರಿಗೆ ಎಂಟಿಬಿ ಪಟ್ಟು
'ಬೇರೆ ಜಿಲ್ಲೆಯಲ್ಲಿ ಕೆಲಸ ಮಾಡೋದು ಅಸಾಧ್ಯ. ತುಮಕೂರು ಜಿಲ್ಲೆ (Tumakur) ಸಿಕ್ಕಿದ್ದರೆ ಚೆನ್ನಾಗಿ ಕೆಲಸ ಮಾಡಬಹುದಿತ್ತು. ತುಮಕೂರು ಜಿಲ್ಲೆಯ ಆಳ - ಅಗಲ ಚೆನ್ನಾಗಿ ಗೊತ್ತಿದೆ. ಒಳ್ಳೆಯ ಕೆಲಸ ಮಾಡಿ ಹೆಸರು ಪಡೆಯುವ ನಿರೀಕ್ಷೆ ಇತ್ತು. ಬೇರೆ ಜಿಲ್ಲೆಗೆ ಹೋಗಿ ಕೆಟ್ಟ ಹೆಸರು ಪಡೆಯುವ ಆಸೆಯಿಲ್ಲ ಎಂದು ಉಸ್ತುವಾರಿ ಕೈತಪ್ಪಿದ್ದಕ್ಕೆ ಸಚಿವ ಮಾಧುಸ್ವಾಮಿ (Madhuswamy) ಅಸಮಾಧಾನ ವ್ಯಕ್ತಪಡಿಸಿದ್ಧಾರೆ.
ಇದುವರೆಗೆ ಕೋವಿಡ್ ಮತ್ತು ಅತಿವೃಷ್ಟಿಯ ಉಸ್ತುವಾರಿಗಳನ್ನು ಮಾತ್ರ ನೇಮಿಸಲಾಗಿತ್ತೆ ಹೊರತು ಜಿಲ್ಲಾ ಉಸ್ತುವಾರಿ ಎಂಬುದಾಗಿ ಯಾರಿಗೂ ನಿರ್ದಿಷ್ಟಜವಾಬ್ದಾರಿ ಹಂಚಿಕೆ ಮಾಡಿರಲಿಲ್ಲ. ಆದರೂ ಬಹುತೇಕ ಎಲ್ಲ ಸಚಿವರೂ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನೇ ನಿಭಾಯಿಸುತ್ತಿದ್ದರು. ಇದೀಗ ಹಲವು ಬದಲಾವಣೆಗಳೊಂದಿಗೆ ಉಸ್ತುವಾರಿಗಳ ಪಟ್ಟಿಅಧಿಕೃತವಾಗಿ ಪ್ರಕಟಗೊಂಡಿದೆ.