Asianet Suvarna News Asianet Suvarna News

8 ಗಂಟೆ ಅಲೆದರೂ ಗರ್ಭಿಣಿಗೆ ಸಿಗಲಿಲ್ಲ ಚಿಕಿತ್ಸೆ; ಹೊಟ್ಟೆಯಲ್ಲೇ ಮಗು ಸಾವು

ಕೋವಿಡ್‌ಯೇತರ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳು ನಿರಾಕರಿಸುತ್ತಿದ್ದು ರಾತ್ರಿಯೆಲ್ಲಾ ಸುತ್ತಾಡಿದರೂ ಗರ್ಭಿಣಿಗೆ ಚಿಕಿತ್ಸೆ ಸಿಗದೇ ಪರದಾಡಿದ್ದಾರೆ. ಶ್ರೀರಾಂಪುರ ನಿವಾಸಿಯಾಗಿರುವ ಗರ್ಭಿಣಿ ಚಿಕಿತ್ಸೆಗಾಗಿ 8 ಗಂಟೆ ಆಟೋದಲ್ಲಿ ಅಲೆದಾಡಿದ್ದಾರೆ. 

ಬೆಂಗಳೂರು (ಜು. 20): ಕೋವಿಡ್‌ಯೇತರ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳು ನಿರಾಕರಿಸುತ್ತಿದ್ದು ರಾತ್ರಿಯೆಲ್ಲಾ ಸುತ್ತಾಡಿದರೂ ಗರ್ಭಿಣಿಗೆ ಚಿಕಿತ್ಸೆ ಸಿಗದೇ ಪರದಾಡಿದ್ದಾರೆ. 

ಶ್ರೀರಾಂಪುರ ನಿವಾಸಿಯಾಗಿರುವ ಗರ್ಭಿಣಿ ಚಿಕಿತ್ಸೆಗಾಗಿ 8 ಗಂಟೆ ಆಟೋದಲ್ಲಿ ಅಲೆದಾಡಿದ್ದಾರೆ. ವಿಕ್ಟೋರಿಯಾ, ವಾಣಿವಿಲಾಸ ಆಸ್ಪತ್ರೆಗಳಿಗೆ ಹೋದರೂ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಕೊನೆಗೆ ಆಟೋದಲ್ಲಿ ಹೆರಿಗೆಯಾಗಿದ್ದು  ಮಗು ಮಾತ್ರ ಬದುಕುಳಿದಿಲ್ಲ.  ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿದೆ. ಅಧಿಕಾರಿಗಳು ಸರಿಯಾದ ವ್ಯವಸ್ಥೆ ಕಲ್ಪಿಸುವಲ್ಲಿ ಪದೇ ಪದೇ ವಿಫಲರಾಗುತ್ತಿದ್ದಾರೆ. 

ಬೆಂಗ್ಳೂರು ಕೊರೊನಾ ಹಾಟ್‌ಸ್ಪಾಟ್‌;' ವೈರಲ್ ಲೋಡ್‌'ನಿಂದ ಸೋಂಕು ಹೆಚ್ಚುವ ಭೀತಿ

ಒಂದೆಡೆ ಸಿಎಂ, ಆರೋಗ್ಯ ಸಚಿವರು ಆಸ್ಪತ್ರೆಗಳಲ್ಲಿ ಬೆಡ್‌ ವ್ಯವಸ್ಥೆ ಮಾಡಿದ್ದೇವೆ. ಯಾರಿಗೂ ತೊಂದರೆಯಾಗುವುದಿಲ್ಲ. ಆಸ್ಪತ್ರೆಗಳಿಗೂ ಸೂಚಿಸಿದ್ದೇವೆ ಎನ್ನುತ್ತಾರೆ. ಇನ್ನೊಂದು ಕಡೆ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ನಿಜಕ್ಕೂ ಸರ್ಕಾರ, ಸಂಬಂಧಪಟ್ಟ ಅಧಿಕಾರಿಗಳು ಏನ್ಮಾಡ್ತಿದ್ದಾರೆ ಎಂಬುದು ಮಾತ್ರ ಬಗೆಹರಿಯುತ್ತಿಲ್ಲ. 

Video Top Stories