ಬೆಂಗ್ಳೂರು ಕೊರೊನಾ ಹಾಟ್‌ಸ್ಪಾಟ್; 'ವೈರಲ್ ಲೋಡ್'ನಿಂದ ಸೋಂಕು ಹೆಚ್ಚುವ ಭೀತಿ
ರಾಜ್ಯದಲ್ಲಿ ಕೊರೋನಾ ಸೋಂಕು ಲಕ್ಷಣವುಳ್ಳ (ಸಿಮ್ಟಮ್ಯಾಟಿಕ್) ಸೋಂಕಿತರ ಪ್ರಮಾಣ ತೀವ್ರವಾಗಿ ಹೆಚ್ಚಾಗುತ್ತಿದೆ. ಕೇವಲ ಒಂದು ತಿಂಗಳ ಹಿಂದೆ 100 ಮಂದಿ ಸಕ್ರಿಯ ಸೋಂಕಿತರಲ್ಲಿ ಕೇವಲ 3 ಮಂದಿ ಲಕ್ಷಣವುಳ್ಳವರಾಗಿದ್ದರೆ ಪ್ರಸ್ತುತ ಈ ಸಂಖ್ಯೆ 40 ಮಂದಿಗೆ ಹೆಚ್ಚಿದೆ.
ಬೆಂಗಳೂರು (ಜು. 20): ರಾಜ್ಯದಲ್ಲಿ ಕೊರೋನಾ ಸೋಂಕು ಲಕ್ಷಣವುಳ್ಳ (ಸಿಮ್ಟಮ್ಯಾಟಿಕ್) ಸೋಂಕಿತರ ಪ್ರಮಾಣ ತೀವ್ರವಾಗಿ ಹೆಚ್ಚಾಗುತ್ತಿದೆ. ಕೇವಲ ಒಂದು ತಿಂಗಳ ಹಿಂದೆ 100 ಮಂದಿ ಸಕ್ರಿಯ ಸೋಂಕಿತರಲ್ಲಿ ಕೇವಲ 3 ಮಂದಿ ಲಕ್ಷಣವುಳ್ಳವರಾಗಿದ್ದರೆ ಪ್ರಸ್ತುತ ಈ ಸಂಖ್ಯೆ 40 ಮಂದಿಗೆ ಹೆಚ್ಚಿದೆ.
ಇದಕ್ಕೆ ಮುಖ್ಯ ಕಾರಣ ವೈರಲ್ ಲೋಡ್ (ಸೋಂಕಿತರಲ್ಲಿ ಇರುವ ವೈರಾಣುವಿನ ಪ್ರಮಾಣ) ಹೆಚ್ಚಾಗುತ್ತಿರುವುದು. ಸೋಂಕಿತರಲ್ಲಿ ವೈರಲ್ ಲೋಡ್ ಹೆಚ್ಚಾಗಿರುವ ಪರಿಣಾಮ ಲಕ್ಷಣವುಳ್ಳ ಸೋಂಕಿತರ ಪ್ರಮಾಣ ಹೆಚ್ಚುತ್ತಿದೆ. ಸೋಂಕು ಲಕ್ಷಣಗಳುಳ್ಳ ಸೋಂಕಿತರಿಂದಲೇ ಹೆಚ್ಚು ಮಂದಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಇನ್ನು ಮುಂದೆ ಇನ್ನೂ ವೇಗವಾಗಿ ಸೋಂಕು ಹರಡಬಹುದು. ಚೇತರಿಕೆ ವಿಳಂಬ ಆಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಅಬ್ಬಾ..! ಕೊನೆಗೂ ಕೊರೊನಾ ಹೆಮ್ಮಾರಿಗೆ ಮದ್ದು ಅರೆದ ರಷ್ಯಾ...!
ರಾಜ್ಯದಲ್ಲಿ ಜೂ.17ರವರೆಗೂ ದಾಖಲಾದ ಒಟ್ಟು ಪ್ರಕರಣಗಳ ಪೈಕಿ ಸಕ್ರಿಯ ಸೋಂಕಿತರಲ್ಲಿ ಕೇವಲ ಶೇ.3 ಮಂದಿಗೆ ಮಾತ್ರ ಸೋಂಕು ಲಕ್ಷಣಗಳಿತ್ತು. ಆದರೆ, ಈಗ ಈ ಸಂಖ್ಯೆ ಬದಲಾಗಿದ್ದು, ಪ್ರಸ್ತುತ ಸಕ್ರಿಯ ಸೋಂಕಿತರಲ್ಲಿ ಬರೋಬ್ಬರಿ ಶೇ.40ರಷ್ಟುಮಂದಿಗೆ ರೋಗ ಲಕ್ಷಣ ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.