Asianet Suvarna News Asianet Suvarna News

ಅತ್ಯಂತ ಮೋಸ, ಮರುತನಿಖೆಯಾಗಲಿ: ಪರೇಶ್ ಮೇಸ್ತಾ ಸಾವು, ಸಿಬಿಐ ವರದಿಗೆ ಮುತಾಲಿಕ್ ಕಿಡಿ

Pramod Muthalik on Paresh Mesta Case: ಪರೇಶ್ ಮೇಸ್ತಾನನ್ನು ನೂರಕ್ಕೆ ನೂರು ಕೊಲೆ ಮಾಡಲಾಗಿದೆ ಎಂದು ಪ್ರಮೋದ್‌ ಮುತಾಲಿಕ್‌ ಹೇಳಿದರು 

ಉಡುಪಿ (ಅ. 04): ಪರೇಶ್ ಮೇಸ್ತಾನನ್ನು ನೂರಕ್ಕೆ ನೂರು ಕೊಲೆ ಮಾಡಲಾಗಿದೆ, ಸಹಜ ಸಾವು ಅನ್ನೋದು ತಪ್ಪು,  ಈ ಪ್ರಕ್ರಿಯೆ ಅನ್ಯಾಯವಾಗಿದೆ, ನಾನು ಇದನ್ನು ಧಿಕ್ಕರಿಸುತ್ತೇನೆ, ವಿರೋಧಿಸುತ್ತೇನೆ, ಇದು ಅತ್ಯಂತ ಮೋಸ ಮಾಡಿದ ವರದಿ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹೇಳಿದರು. ಉಡುಪಿ ಪರೇಶ್ ಮೆಸ್ತ ಕೊಲೆಯಲ್ಲ ಆಕಸ್ಮಿಕ ಸಾವು, ಸಿಬಿಐ ವರದಿ ವಿಚಾರಕ್ಕೆ ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಅವರು " 2017ರಲ್ಲಿ ಪರೇಶ್ ಮೆಸ್ತ ಹತ್ಯೆ ಆಯಿತು, ಇಡೀ ರಾಜ್ಯದ್ಯಂತ ಹಿಂದುಗಳ ಪ್ರತಿಭಟಿಸಿದರು, ಗೃಹ ಸಚಿವ ಅಮಿತ್ ಶಾ ಕೂಡ ಅವರ ಮನೆಗೆ ಭೇಟಿ ಕೊಟ್ಟರು, ಆ ಗಂಭೀರ ಪ್ರಕರಣವಾದಾಗ ಮುಖ್ಯಮಂತ್ರಿಯ ಸಿದ್ದರಾಮಯ್ಯ ಆಗಿದ್ರು, ಆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡಿದೆ" ಎಂದರು. 

"ಮೂರು ವರ್ಷದ ನಂತರ ಸಿಬಿಐ ಬಿ ರಿಪೋರ್ಟ್ ಹಾಕಿದೆ, ಈಗಿನ ಕೇಂದ್ರ ಸರ್ಕಾರ ಕೇಸನ್ನು ರಿ ಓಪನ್ ಮಾಡಬೇಕು, ಸಂಪೂರ್ಣವಾಗಿ ತನಿಖೆ ಮಾಡಬೇಕು, ರಾಜ್ಯದ್ಯಂತ ಶ್ರೀರಾಮ ಸೇನೆ ಹೋರಾಟ ಮಾಡುತ್ತದೆ, ಇದು ಹಿಂದುತ್ವಕ್ಕೆ, ಕುಟುಂಬಕ್ಕೆ ಅನ್ಯಾಯ ಮಾಡಿದ ವರದಿ. ತಪ್ಪಿತಸ್ಥರು ಮುಸ್ಲಿಂ ಗೂಂಡಾ ಕಿಡಿಗೇಡಿಗಳು" ಎಂದು ಪ್ರಮೋದ್‌ ಮುತಾಲಿಕ್‌ ಕಿಡಿಕಾರಿದರು 

Paresh Mesta ಸಾವು ಕೊಲೆಯಲ್ಲ, ಸಹಜ ಸಾವು : ಸಿಬಿಐ ವರದಿ