Asianet Suvarna News Asianet Suvarna News

Paresh Mesta ಸಾವು ಕೊಲೆಯಲ್ಲ, ಸಹಜ ಸಾವು : ಸಿಬಿಐ ವರದಿ

  • ಪರೇಶ್‌ ಮೇಸ್ತಾ ಸಾವು ಕೊಲೆಯಲ್ಲ,ಸಹಜ!
  •  ಸಿಬಿಐನಿಂದ ಹೊನ್ನಾವರ ಕೋರ್‌್ಟಗೆ ವರದಿ ಸಲ್ಲಿಕೆ
  • ಪರೇಶ್‌ ಮೇಸ್ತಾ ಸಾವು ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು.
Paresh Mestas death is not murder it is natural rav
Author
First Published Oct 4, 2022, 2:33 PM IST

ಕಾರವಾರ (ಅ.4) : ತೀವ್ರ ವಿವಾದ, ಸಂಘರ್ಷಕ್ಕೆ ಕಾರಣವಾಗಿದ್ದ ಹೊನ್ನಾವರದ ಮೀನುಗಾರ ಯುವಕ ಪರೇಶ್‌ ಮೇಸ್ತಾ ಸಾವು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮೇಸ್ತಾನದು ಕೊಲೆಯಲ್ಲ, ಆಕಸ್ಮಿಕ ಸಾವು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಹೊನ್ನಾವರ ನ್ಯಾಯಾಲಯಕ್ಕೆ ಸೋಮವಾರ ವರದಿ ಸಲ್ಲಿಸಿದೆ.

ಪರೇಶ್‌ ಮೇಸ್ತ ಕೊಲೆ ಆರೋಪಿಗೆ ವಕ್ಫ್ ಮಂಡಳಿ ಹುದ್ದೆ ನೀಡಿ, ತಡೆ

ಮೇಸ್ತಾ ಸಾವಿನಲ್ಲಿ ಆರೋಪ ಎದುರಿಸುತ್ತಿರುವವರ ಪಾತ್ರದ ಕುರಿತು ಯಾವುದೇ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಮರಣೋತ್ತರ ಪರೀಕ್ಷೆ ಸೇರಿ ವಿವಿಧ ವರದಿಗಳು ಮೇಸ್ತಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆಂದು ಹೇಳುತ್ತಿವೆ ಎಂದು ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲಕ ಮೇಸ್ತಾನದು ಸಹಜ ಸಾವು ಎಂದು ವರದಿ ಹೇಳಿದೆ. ಈ ವರದಿ ಪರಿಶೀಲಿಸಿದ ನ್ಯಾಯಾಲಯವು ತೀರ್ಪನ್ನು ನ.16ಕ್ಕೆ ಮುಂದೂಡಿದೆ.

2017ರ ಡಿಸೆಂಬರ್‌ 6ರಂದು ಹೊನ್ನಾವರದಲ್ಲಿ ನಡೆದ ಗಲಭೆಯೊಂದು ಕೋಮುಸಂಘರ್ಷಕ್ಕೆ ತಿರುಗಿ ಘಟನಾ ಸ್ಥಳದಲ್ಲಿದ್ದ ಪರೇಶ್‌ ಮೇಸ್ತಾ ಕಾಣೆಯಾಗಿದ್ದ. ಬಳಿಕ ಡಿ.8ರಂದು ನಗರದ ಶನಿ ದೇವಸ್ಥಾನದ ಹಿಂಭಾಗದ ಶೆಟ್ಟಿಕೆರೆಯಲ್ಲಿ ಮೇಸ್ತಾ ಮೃತದೇಹ ಪತ್ತೆಯಾಗಿತ್ತು. ಅಷ್ಟರಲ್ಲಾಗಲೇ ಕರಾವಳಿ ಭಾಗದಲ್ಲಿ ಕೋಮುಗಲಭೆಯಿಂದಾಗಿ ಕೆಲ ಹಿಂದೂ ಯುವಕರ ಹತ್ಯೆ ನಡೆದಿದ್ದ ಹಿನ್ನೆಲೆಯಲ್ಲಿ ಮೇಸ್ತಾನನ್ನು ಕೂಡ ಅನ್ಯಕೋಮಿನವರೇ ಹತ್ಯೆ ಮಾಡಿದ್ದಾರೆಂದು ಆರೋಪಿ ಹಿಂದೂ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ರೋಶ ಹೊರಹಾಕಿದ್ದರು.

ಪರೇಶ್‌ ಮೇಸ್ತಾ ಸಾವು ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ನಂತರ ನಡೆದ ಪ್ರತಿಭಟನೆ ವೇಳೆಯಲ್ಲಂತೂ ಉತ್ತರ ಕನ್ನಡ ಹೊತ್ತಿ ಉರಿದಿತ್ತು. ಕುಮಟಾ, ಹೊನ್ನಾವರ, ಶಿರಸಿ ಮತ್ತಿತರ ಕಡೆ ನಡೆದ ಗಲಭೆಯಲ್ಲಿ ಹಲವು ವಾಹನಗಳಿಗೆ ಬೆಂಕಿ ಹಾಕಲಾಗಿತ್ತು. ಲಾಠಿ ಪ್ರಹಾರ ನಡೆದು ಹಲವರಿಗೆ ಗಾಯಗಳೂ ಆಗಿತ್ತು. ನೂರಾರು ಜನರ ವಿರುದ್ಧ ಪ್ರಕರಣ ದಾಖಲಾಯಿತು. ಕುಮಟಾದಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಆಗಿನ ಐಜಿಪಿಯವರ ಕಾರನ್ನೇ ಬುಡಮೇಲು ಮಾಡಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು.

ಈ ಘಟನೆ ರಾಜಕೀಯ ಸಮರಕ್ಕೂ ನಾಂದಿ ಹಾಡಿತು. ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನಿರಂತರ ವಾಕ್ಸಮರ ನಡೆಯಿತಲ್ಲದೆ ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲೂ ಪರೇಶ್‌ ಮೇಸ್ತಾ ಸಾವು ಪ್ರಮುಖ ವಿಷಯವಾಗಿತ್ತು. ಬಿಜೆಪಿ ನಾಯಕ ಅಮಿತ್‌ ಶಾ ಹೊನ್ನಾವರಕ್ಕೆ ಅಗಮಿಸಿ ಮೇಸ್ತಾ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು.

ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರಿಂದ ವ್ಯಕ್ತವಾದ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಅಂದಿನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಆ ಬಳಿಕ ಐದು ಮಂದಿಯ ಬಂಧನವೂ ಆಗಿತ್ತು. ಈ ಕುರಿತು ಸುದೀರ್ಘ ನಾಲ್ಕೂವರೆ ವರ್ಷಗಳ ತನಿಖೆ ನಂತರ ಸಿಬಿಐನಿಂದ ಇದೀಗ ನ್ಯಾಯಾಲಯಕ್ಕೆ ವರದಿ ಸಲ್ಲಿಕೆಯಾಗಿದೆ.

ಗಲಭೆಯಿಂದ ಇಡೀ ಜಿಲ್ಲೆಯೇ ಹೊತ್ತಿ ಉರಿದಿತ್ತು

ಪರೇಶ ಮೇಸ್ತಾ ಸಾವು ರಾಜ್ಯವನ್ನೇ ತಲ್ಲಣಗೊಳಿಸಿತ್ತು. ನಂತರ ನಡೆದ ಗಲಭೆಯಲ್ಲಂತೂ ಉತ್ತರ ಕನ್ನಡಕ್ಕೇ ಬೆಂಕಿ ಬಿದ್ದಂತಾಗಿತ್ತು. ಈ ಸಾವಿನ ಘಟನೆ ಎರಡು ಕೋಮುಗಳ ನಡುವೆ ಘರ್ಷಣೆಗೆ ತಿರುಗಿತು. ಕುಮಟಾ, ಹೊನ್ನಾವರ, ಶಿರಸಿ ಮತ್ತಿತರ ಕಡೆ ನಡೆದ ಗಲಭೆಯಲ್ಲಿ ವಾಹನಗಳು ಹೊತ್ತಿ ಉರಿದವು. ಲಾಠಿ ಪ್ರಹಾರ ನಡೆದು ಹಲವರು ಗಾಯಗೊಂಡರು. ನೂರಾರು ಜನರ ವಿರುದ್ಧ ಪ್ರಕರಣ ದಾಖಲಾಯಿತು. ಕುಮಟಾದಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಆಗಿನ ಐಜಿಪಿಯವರ ಕಾರನ್ನೇ ಬುಡಮೇಲು ಮಾಡಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು.

ಹೊನ್ನಾವರದ ಪರೇಶ್ ಮೇಸ್ತ ಸಾವಿನ ಹಿಂದೆ ಬಿಜೆಪಿಯವರೇ ಭಾಗಿ: ಡಿಕೆಶಿ ಗಂಭೀರ ಆರೋಪ

ಈ ಘಟನೆ ರಾಜಕೀಯ ಸಮರಕ್ಕೂ ನಾಂದಿ ಹಾಡಿತು. ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನಿರಂತರ ವಾಕ್ಸಮರ ನಡೆಯಿತಲ್ಲದೆ. ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲೂ ಪರೇಶ ಮೇಸ್ತಾ ಸಾವು ಪ್ರಮುಖ ವಿಷಯವಾಗಿತ್ತು. ತೀವ್ರ ಒತ್ತಡದ ನಡುವೆ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು. ನಂತರವೂ ಆಗಾಗ ಪರೇಶ ಮೇಸ್ತ ಸಾವು ವಾದ-ವಿವಾದಕ್ಕೆ ಆಸ್ಪದವಾಗುತ್ತಲೇ ಇತ್ತು. ಬಿಜೆಪಿಯ ನಾಯಕ ಅಮಿತ್‌ ಶಾ ಹೊನ್ನಾವರಕ್ಕೆ ಅಗಮಿಸಿ ಪರೇಶ ಮೇಸ್ತಾ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಇವರ ಜತೆ ಬಿಜೆಪಿಯ ಪ್ರಮುಖರೂ ಆಗಮಿಸಿದ್ದರು. ಇದು ಪ್ರಕರಣ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.

ಸಾವಿನ ನಂತರ ನಡೆದ ಗಲಭೆಗೆ ಸಂಬಂಧಿಸಿದಂತೆ ಜನತೆಯ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಪ್ರಕರಣಗಳನ್ನು ವಾಪಸ್‌ ಪಡೆಯುವುದಾಗಿ ಘೋಷಿಸಿತು. ಅದಿನ್ನೂ ಪ್ರಕ್ರಿಯೆ ಪೂರ್ಣವಾಗಿ ನಡೆದಿಲ್ಲ. ಈ ನಡುವೆ ಸೊಮವಾರ ಶಿರಸಿ ನ್ಯಾಯಾಲಯ ಗಲಭೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ 41 ಜನರನ್ನು ನಿರ್ದೋಷಿಗÜಳೆಂದು ತೀರ್ಪು ನೀಡಿದೆ. ಇನ್ನೂ ಎರಡು ಪ್ರಕರಣಗಳು ಬಾಕಿ ಇವೆ.

ಪರೇಶ ಮೇಸ್ತ ಸಾವು ಹತ್ಯೆ ಅಲ್ಲ, ಆಕಸ್ಮಿಕ ಸಾವು ಎಂದು ಸಿಬಿಐ ವರದಿ ಸಲ್ಲಿಸಿರುವುದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದೆ. ಈಗ ವರದಿಯನ್ನು ಪರಿಶೀಲಿಸಿ ತೀರ್ಪು ನೀಡಲಿರುವ ನ್ಯಾಯಾಲಯದತ್ತ ಎಲ್ಲರ ಚಿತ್ತ ನೆಟ್ಟಿದೆ. ಸಿಬಿಐ ವರದಿ ಈಗ ಮತ್ತೊಂದು ಸುತ್ತಿನ ರಾಜಕೀಯ ಲೆಕ್ಕಾಚಾರ ಹಾಗೂ ಪರಸ್ಪರ ಚರ್ಚೆ, ರಾಜಕೀಯ ಸಮರಕ್ಕೂ ವೇದಿಕೆಯಾಗುವ ಸಾಧ್ಯತೆ ಇದೆ.

Follow Us:
Download App:
  • android
  • ios