ದೇವೇಗೌಡರ ಮನೆಯಲ್ಲೇ ರೇವಣ್ಣ ಬಂಧನ, ಶರಣಾಗತಿಗೆ ಮುಂದಾದ್ರಾ ಪ್ರಜ್ವಲ್ ರೇವಣ್ಣ?

ಮಾಜಿ ಪ್ರಧಾನಿ ದೇವೇಗೌಡರ ನಿವಾಸದಲ್ಲೇ ರೇವಣ್ಣ ಅರೆಸ್ಟ್, ರೇವಣ್ಣ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ, ಮಹಿಳೆಯರ ಘನತೆ ಕಾಪಾಡಲು ಸರ್ಕಾರ ಬದ್ಧ, ರೇವಣ್ಣ ಬಂಧನದ ಬಳಿಕ ಕಾಂಗ್ರೆಸ್ ಟ್ವೀಟ್ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಪ್ರಜ್ವಲ್ ರೇವಣ್ಣ ವಿಡಿಯೋ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಮೊದಲ ಬಂಧನವಾಗಿದೆ. ಸಂತ್ರಸ್ತೆಯ ಅಪಹರಣ ಕೇಸ್‌ನಲ್ಲಿ ಹೆಚ್‌ಡಿ ರೇವಣ್ಣ ಅವರನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ. ದೇವೇಗೌಡರ ನಿವಾಸದಲ್ಲೇ ರೇವಣ್ಣ ಬಂಧನವಾಗಿದೆ. ಬಂಧನದ ಬಳಿಕ ಪೊಲೀಸರು ರೇವಣ್ಣ ಅವರ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಾಗಿದೆ. ಇತ್ತ ವಿದೇಶದಲ್ಲಿರುವ ಪ್ರಜ್ವಲ್ ರೇವಣ ಶರಣಾಗಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಶರಣಾಗತಿ ಸುಳಿವು ನೀಡಿದ್ದಾರೆ.

Related Video