Asianet Suvarna News Asianet Suvarna News

ಒಂದು ತಿಂಗಳ ಬಳಿ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ, ಶರಣಾಗತಿಗೆ ಶುಭ ದಿನ ಘೋಷಿಸಿದ ಸಂಸದ!

ಕುಟುಂಬದ ಕ್ಷಮೆ ಕೋರಿ ಪ್ರಜ್ವಲ್ ರೇವಣ್ಣ ವಿಡಿಯೋ ಸಂದೇಶ, ಮೇ.31ಕ್ಕೆ ಸರೆಂಡರ್, ಭವಾನಿ ರೇವಣ್ಣಗೆ ಬಂಧನ ಭೀತಿ, ಶುರುವಾಯ್ತು ಸಂಕಷ್ಟ, ಮೋದಿಯ ಹಿಂದೂ ರಾಷ್ಟ್ರ ನಿರ್ಮಾಣ ಕನಸಿನ ಮಾತು, ಸಿದ್ದರಾಮಯ್ಯ ವಾಗ್ದಾಳಿ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ಅಶ್ಲೀಲ ವಿಡಿಯೋ ಹಗರಣದ ಬೆನ್ನಲ್ಲೇ ವಿದೇಶಕ್ಕೆ ಪರಾರಿಯಾದ  ಸಂಸದ ಪ್ರಜ್ವಲ್ ರೇವಣ್ಣ ಇದೀಗ ಬರೋಬ್ಬರಿ 1 ತಿಂಗಳ ಬಳಿಕ ಪ್ರತ್ಯಕ್ಷರಾಗಿದ್ದಾರೆ. ಏಪ್ರಿಲ್ 26ರಂದು ಕರ್ನಾಟಕದ ಮೊದಲ ಮತದಾನ ದಿನವೇ ಪ್ರಜ್ವಲ್ ಜರ್ಮನಿಗೆ ಪರಾರಿಯಾಗಿದ್ದ. ಇದೀಗ ವಿಡಿಯೋ ಸಂದೇಶದ ಮೂಲಕ ಪ್ರತ್ಯಕ್ಷರಾಗಿದ್ದರೆ. ತಂದೆ-ತಾಯಿ, ದೇವೇಗೌಡರು, ಕುಮಾರಸ್ವಾಮಿ, ಕಾರ್ಯಕರ್ತರು ಹಾಗೂ ಕರ್ನಾಟಕ ಜನತೆಯಲ್ಲಿ ಕ್ಷೆ ಕೋರುತ್ತಾ 3 ನಿಮಿಷದ ವಿಡಿಯೋ ಪೋಸ್ಟ್ ಮಾಡಲಾಗಿದೆ. ಇದೇ ವೇಳೆ ವಿಚಾರಣೆ ಮೇ.31ರಂದು ಹಾಜರಾಗುತ್ತೇನೆ ಎಂದು ಶುಭದಿನವನ್ನೂ ಘೋಷಿಸಿದ್ದಾರೆ. 

Video Top Stories