Asianet Suvarna News Asianet Suvarna News

ಪ್ರಜ್ವಲ್ ರೇವಣ್ಣ ವಿಡಿಯೋ ಹಗರಣ ರಿಲೀಸ್ ಮಾಡಿದ್ದು ಯಾರು? ಸ್ಫೋಟಕ ಮಾಹಿತಿ ಬಹಿರಂಗ!

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ದೇಶಾದ್ಯಂತ ಭಾರಿ ಸಂಚಲನ, ಮಹಾನ್ ನಾಯಕ ಯಾರು? ಪೆನ್‌ಡ್ರೈವ್ ವಿಚಾರದಲ್ಲಿ ಹೆಚ್‌ಡಿಕೆ-ಡಿಕೆ ನಡುವೆ ವಾರ್ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೋಗಳ ಸರಮಾಲೆಯೇ ಹೊರಬಿದ್ದಿದ್ದು ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಇತ್ತ ಆರೋಪಿ ಪ್ರಜ್ವಲ್ ರೇವಣ್ಣ ಜರ್ಮನಿಗೆ ಹಾರಿದ್ದಾರೆ. ಇತ್ತ ಆರೋಪ-ಪ್ರತ್ಯಾರೋಪಗಳು ಜೋರಾಗಿದೆ. ಇದರ ನಡುವೆ ಎಸ್ಐಟಿ ತಂಡ ರಚನೆಯಾಗಿದ್ದು ತನಿಖೆ ಆರಂಭಗೊಂಡಿದೆ. ಮಹಿಳಾ ಆಯೋಗ ಕೂಡ ಈ ಘಟನೆ ಖಂಡಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದೆ. ಇದರ ನುಡುವೆ ಈ ವಿಡಿಯೋಗಳು ಹೊರಬಂದಿದ್ದು ಹೇಗೆ? ಈ ಕುರಿತು ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಮಹತ್ವದ ಹೇಳಿಕೆ ನೀಡಿದ್ದಾರೆ. ಇತ್ತ ಹೆಚ್‌ಡಿ ಕುಮಾರಸ್ವಾಮಿ ಕೂಡ ಈ ವಿಡಿಯೋ ರಿಲೀಸ್ ಹಿಂದೆ ಮಹಾನ್ ನಾಯಕನ ಕೈವಾಡವಿದೆ ಎಂದಿದ್ದಾರೆ. 

Video Top Stories