
ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಸಿಂಹಾಸನ ಸಮರ ಮುಂದುವರೆದಿದೆ. ಸಂಕ್ರಾಂತಿ ಭವಿಷ್ಯವಾಣಿಯು ಈ ಸಂಘರ್ಷದ ಹೊಸ ದಿಕ್ಕನ್ನು ಮತ್ತು ನಾಯಕರ ಗ್ರಹಬಲವನ್ನು ಸೂಚಿಸುತ್ತಿದ್ದು, ಹೆಚ್‌ಡಿಕೆ ರಾಜಕೀಯ ಭವಿಷ್ಯದ ಬಗ್ಗೆಯೂ ಬ್ರಹ್ಮಾಂಡ ಗುರೂಜಿ ಮಾತನಾಡಿದ್ದಾರೆ.
ಬೆಂಗಳೂರು: ಕಳೆದ ಸಂಕ್ರಾತಿಯಲ್ಲಿಯೂ ಕರ್ನಾಟಕದಲ್ಲಿ ಸಿಂಹಾಸನ ಸಂಘರ್ಷವಿತ್ತು. ಈ ಮಕರ ಸಂಕ್ರಮಣದಲ್ಲಿಯೂ ಅದು ಹಾಗೇ ಇದೆ. ಹಾಗಿದ್ರೆ ಇದಕ್ಕೆ ಅಂತ್ಯ ಯಾವಾಗ? ಸಂಕ್ರಾಂತಿ ಹಬ್ಬದ ಬಳಿಕ ಹೊಸ ದಿಕ್ಕಿಗೆ ಹೊರಳುತ್ತಾ ಸಿಂಹಾಸನ ಸಮರ? ವರುಣವೀರ ಸಿದ್ದರಾಮಯ್ಯ, ಕನಕಾಧಿಪತಿ ಡಿ.ಕೆ.ಶಿವಕುಮಾರ್. ಈ ಇಬ್ಬರಲ್ಲಿ ಯಾರ ಜೊತೆಗಿದೆ ಗ್ರಹಬಲದ ಶಕ್ತಿ? ಸಂಕ್ರಾಂತಿ to ಯುಗಾದಿ. ಕೈ ಸಾಮ್ರಾಜಕ್ಕೆ ಬಹಳ ಕ್ರೂಷಿಯಲ್ ಯಾಕೆ ಗೊತ್ತಾ?
ಇಬ್ಬರು ಬಲಾಡ್ಯರ ನಡುವಿನ ಸಿಂಹಾಸನ ಕಾಳಗವನ್ನ ನಿಲ್ಲಿಸೋಕೆ ಆಗ್ತಿಲ್ಲ. ಒಂದ್ರೀತಿ ಉಭಯ ಸಂಕಟದಲ್ಲಿ ಸಿಲುಕಿದೆ ಕಾಂಗ್ರೆಸ್ ಹೈಕಮಾಂಡ್. ಆದ್ರೆ ಇದು ಹೀಗೆ ಮುಂದುವರೆದ್ರೆ ಕೈ ಸಾಮ್ರಾಜ್ಯವು ದೊಡ್ಡ ಪೆಟ್ಟು ತಿನ್ನಬೇಕಾಗುತ್ತೆ ಎನ್ನುವ ಎಚ್ಚರಿಕೆಯನ್ನ ಕೊಡ್ತಿದೆ ಸಂಕ್ರಾಂತಿ ಭವಿಷ್ಯವಾಣಿ.
ಸಿಂಹಾಸನ ಸಮರದ ಮಧ್ಯೆ ಹೆಚ್‌ಡಿಕೆ ರಾಜ್ಯ ರಾಜಕೀಯಕ್ಕೆ ಬರ್ತಾರೆ ಅನ್ನೋ ಸುದ್ದಿಯೂ ಸಂಕ್ರಾಂತಿ ಹೊತ್ತಲ್ಲಿ ಸದ್ದು ಮಾಡ್ತಿದೆ. ಆದ್ರೆ ದಳಪತಿಗೆ ಈ ನಡೆಯಿಂದ ಒಳ್ಳೇದಾಗಲ್ಲ ಅಂತಿದ್ದಾರೆ ಬ್ರಹ್ಮಾಂಡ ಗುರೂಜಿ. ಹಾಗಿದ್ರೆ ಗುರೂಜಿ ಹೀಗೆ ಹೇಳ್ತಿರೋದ್ಯಾಕೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ