Asianet Suvarna News Asianet Suvarna News

ಕಲ್ಲಿದ್ದಲು ಕೊರತೆ: ಕರ್ನಾಟಕಕ್ಕೆ 'ಕರೆಂಟ್‌' ಶಾಕ್‌..!

Oct 10, 2021, 12:20 PM IST

ಬೆಂಗಳೂರು(ಅ.10): ರಾಜ್ಯದಲ್ಲಿ ವಿದ್ಯುತ್‌ ಕ್ಷಾಮ ಎದುರಾಗುವ ಭೀತಿ ಎದುರಾಗಿದೆ. ಹೌದು, ರಾಯಚೂರು ಹಾಗೂ ಬಳ್ಳಾರಿಯಲ್ಲಿನ ಶಾಖೋತ್ಪನ್ನ ಘಟಕಗಳಲ್ಲಿ ಕಲ್ಲಿದ್ದಲಿನ ಕೊರತೆ ಎದುರಾಗಿದೆ. ರಾಯಚೂರಿನ 8 ಘಟಕಗಳಲ್ಲಿ 4 ಘಟಕಗಳು ಈಗಾಗಲೇ ಸ್ಥಗಿತವಾಗಿವೆ. ಇನ್ನೂ ಬಳ್ಳಾರಿಯಲ್ಲೂ ಕೂಡ ಎರಡು ಘಟಕಗಳು ಸ್ಥಗಿತವಾಗಿವೆ. ರಾಜ್ಯದಲ್ಲಿ ವಿದ್ಯುತ್‌ ಉತ್ಪಾದನೆಯಲ್ಲಿ ಶೇ.67 ರಷ್ಟು ಕುಸಿತವಾಗಿದೆ. ರಾಜ್ಯಕ್ಕೆ ನಿತ್ಯ ಗರಿಷ್ಠ 8499 ಮೆಗಾವ್ಯಾಟ್‌ ವಿದ್ಯುತ್‌ ಬೇಕು. ಆದರೆ ಈಗ ಕಲ್ಲಿದ್ದಲಿನ ಕೊರತೆಯಿಂದಾಗಿ ಇಷ್ಟು ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆಯಾಗುತ್ತಿಲ್ಲ. 

ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ: ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ಹೀಗೆ

Video Top Stories