Asianet Suvarna News Asianet Suvarna News

ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ: ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ಹೀಗೆ

Oct 10, 2021, 11:47 AM IST

ಬೆಂಗಳೂರು (ಅ. 10):  ರಾಜ್ಯದ ವಿದ್ಯುತ್‌ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ ಮುಂದುವರೆದಿದ್ದು, ಬಳ್ಳಾರಿ ತಾಲೂಕಿನ ಕುಡಿತಿನಿ ಬಳಿಯ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಕೇಂದ್ರ(ಬಿಟಿಪಿಎಸ್‌)ದ ಎರಡು ಘಟಕಗಳು ಕಳೆದ ಮೂರು ದಿನಗಳಿಂದ ವಿದ್ಯುತ್‌ ಉತ್ಪಾದನೆ ಸ್ಥಗಿತಗೊಳಿಸಿವೆ. ಸದ್ಯ ಒಂದು ಘಟಕದಿಂದ ಮಾತ್ರ ವಿದ್ಯುತ್‌ ಉತ್ಪಾದನೆ ಮುಂದುವರಿದಿದೆ.ಇನ್ನು ರಾಯಚೂರಿನ ಆರ್‌ಟಿಪಿಎಸ್‌, ವೈಟಿಪಿಎಸ್‌ ಸ್ಥಾವರಗಳಲ್ಲಿ ಕಲ್ಲಿದ್ದಲಿನ ಅಭಾವ ಉಂಟಾಗಿದ್ದು, ಉಭಯ ಸ್ಥಾವರಗಳಿಂದ ಅರ್ಧಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. 

ಕಲ್ಲಿದ್ದಲು ಅಭಾವ: ಬಳ್ಳಾರಿ 2 ಶಾಖೋತ್ಪನ್ನ ಘಟಕ ಸ್ಥಗಿತ

;ಕಲ್ಲಿದ್ದಲು ಕಡಿಮೆಯಾಗಬಾರದೆಂದು ಕ್ರಮ ವಹಿಸಿದ್ದೇವೆ. ಈ ಬಗ್ಗೆ ಗಣಿ ಸಚಿವರ ಜೊತೆಯೂ ಮಾತನಾಡಿದ್ದೇನೆ. ಕಲ್ಲಿದ್ದಲು ಕೊರತೆಯಾಗದಂತೆ ಸಚಿವರು ಭರವಸೆ ನೀಡಿದ್ಧಾರೆ. ನಮ್ಮ ರಾಜ್ಯಕ್ಕೆ ಒಟ್ಟು 10 ರ್ಯಾಕ್ ಕಲ್ಲಿದ್ದಲು ಬರುತ್ತಿದೆ. ಇದನ್ನು 14 ರ್ಯಾಕ್‌ಗೆ ಏರಿಸಿದರೆ ಸರಿ ಹೋಗುತ್ತದೆ' ಎಂದು ಸಿಎಂ ಬೊಮ್ಮಾಯಿ ಹೇಳಿದ್ಧಾರೆ.