BSY ಕೆಳಗಿಳಿಸಲು ಮುಂದಾಗಿದ್ದ ಕಾಣದ ಕೈಗಳು ಯಾವುವು ಗೊತ್ತಾ?

ಜಿಮ್ ಸೋಮ ಹಾಗೂ ಉದಯ್ ಗೌಡ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕೆಡಹುವ ವಿಚಾರದಲ್ಲೂ ಕೈಯಾಡಿಸಿದದ್ದರು. ಇದೀಗ ಈ ನಾಲ್ವರು ಸೇರಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಬಂಡಾಯ ಶಾಸಕರಿಗೆ ಕುಮ್ಮಕ್ಕು ನೀಡಿದ್ದರು ಎನ್ನುವ ಮಾಹಿತಿ ಬಯಲಾಗಿದೆ

First Published Jun 5, 2020, 6:44 PM IST | Last Updated Jun 5, 2020, 6:44 PM IST

ಬೆಂಗಳೂರು(ಜೂ.05): ಕೆಲವು ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಉತ್ತರ ಕರ್ನಾಟಕದ ಕೆಲವು ಬಿಜೆಪಿ ಶಾಸಕರು ಬಂಡಾಯದ ಬಾವುಟ ಹಾರಿಸಿದ್ದು ಎಲ್ಲರಿಗೂ ಗೊತ್ತೇ ಇದೆ.

ಆದರೆ ಈ ಬಂಡಾಯದ ಹಿಂದೆ ಕಾಣದ ಕೈಗಳ ಕೈವಾಡ ಇರುವುದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಗುಪ್ತಚರ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ ಮಾಜಿ ಸಚಿವ, ಶಾಸಕ ಹಾಗೂ ರಾಮನಗರದ ಮಾಜಿ ಸಚಿವ ಈ ಇಬ್ಬರಿಗೆ ಜಿಮ್ ಸೋಮ ಹಾಗೂ ಉದಯ್ ಗೌಡ ಸಾಥ್ ನೀಡಿದ್ದಾರೆ.

ಸಿಎಂ ಸ್ಥಾನದಿಂದ BSY ಕೆಳಗಿಳಿಸಲು ಷಡ್ಯಂತ್ರ..!

ಜಿಮ್ ಸೋಮ ಹಾಗೂ ಉದಯ್ ಗೌಡ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕೆಡಹುವ ವಿಚಾರದಲ್ಲೂ ಕೈಯಾಡಿಸಿದದ್ದರು. ಇದೀಗ ಈ ನಾಲ್ವರು ಸೇರಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಬಂಡಾಯ ಶಾಸಕರಿಗೆ ಕುಮ್ಮಕ್ಕು ನೀಡಿದ್ದರು ಎನ್ನುವ ಮಾಹಿತಿ ಬಯಲಾಗಿದೆ.  30 ಶಾಸಕರು ನೀವು ಸಭೆ ಸೇರಿ, ಯಾವ ಕಾರಣಕ್ಕೂ ಭಯಪಡಬೇಡಿ, ನಾವು ನಿಮ್ಮನ್ನು ಹೈಕಮಾಂಡ್‌ಗೆ ಭೇಟಿ ಮಾಡಿಸುತ್ತೇವೆ ಎಂದು ಶಾಸಕರಿಗೆ ಕುಮ್ಮಕ್ಕು ನೀಡಿದ್ದರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.