ಸಿಎಂ ಸ್ಥಾನದಿಂದ BSY ಕೆಳಗಿಳಿಸಲು ಷಡ್ಯಂತ್ರ..!

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ರಚನೆಯಾಗಲು ಸಹಕರಿಸಿದ್ದ ಕೆಲವರಿಂದಲೇ ಸಿಎಂ ಬಿಎಸ್‌ವೈ ಕುರ್ಚಿ ಅಲುಗಾಡಿಸಲು ಷಡ್ಯಂತ್ರ ರೂಪಿಸಿದ್ದರು. ಈ ಕುರಿತಂತೆ ಗುಪ್ತಚರದಳ ಸಿಕ್ಕ ಮಾಹಿತಿ ತಿಳಿದು ಯಡಿಯೂರಪ್ಪ ಬೆಚ್ಚಿ ಬಿದ್ದಿದ್ದಾರೆ.

First Published Jun 5, 2020, 6:16 PM IST | Last Updated Jun 5, 2020, 6:16 PM IST

ಬೆಂಗಳೂರು(ಜೂ.05): ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸರ್ಕಾರ ರಚನೆಗೆ ಸಾಥ್ ನೀಡಿದ್ದವರೇ ಅವರನ್ನು ಸಿಎಂ ಪಟ್ಟದಿಂದ ಕೆಳಗಿಳಿಸಲು ಸಂಚು ರೂಪಿಸಿದ್ದರು ಎನ್ನುವ ಎಕ್ಸ್‌ಕ್ಲೂಸಿವ್ ಮಾಹಿತಿ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ರಚನೆಯಾಗಲು ಸಹಕರಿಸಿದ್ದ ಕೆಲವರಿಂದಲೇ ಸಿಎಂ ಬಿಎಸ್‌ವೈ ಕುರ್ಚಿ ಅಲುಗಾಡಿಸಲು ಷಡ್ಯಂತ್ರ ರೂಪಿಸಿದ್ದರು. ಈ ಕುರಿತಂತೆ ಗುಪ್ತಚರದಳ ಸಿಕ್ಕ ಮಾಹಿತಿ ತಿಳಿದು ಯಡಿಯೂರಪ್ಪ ಬೆಚ್ಚಿ ಬಿದ್ದಿದ್ದಾರೆ.

ಕರ್ನಾಟಕ ರಾಜ್ಯಸಭಾ ಎಲೆಕ್ಷನ್: ಅಚ್ಚರಿ ಹೆಸರು ಕೇಳಿ ಬಿಜೆಪಿ ನಾಯಕರೇ ತಬ್ಬಿಬ್ಬು..!

ಕೆಲವು ದಿನಗಳ ಹಿಂದೆ ಉಮೇಶ್ ಕತ್ತಿ ನೇತೃತ್ವದಲ್ಲಿ ಉತ್ತರ ಕರ್ನಾಟಕದ 27 ಬಿಜೆಪಿ ಶಾಸಕರು ಸಭೆ ಸೇರಿ ಬಂಡಾಯದ ಬಾವುಟ ಹಾರಿಸಿದ್ದರು. ಆದರೆ 24 ಗಂಟೆಗಳೊಳಗಾಗಿ ಹೈಕಮಾಂಡ್ ಈ ಬಂಡಾಯವನ್ನು ಹತ್ತಿಕ್ಕಿತ್ತು.
ಯಡಿಯೂರಪ್ಪ ವಿರುದ್ಧ ಸಂಚು ರೂಪಿಸಿದವರು ಯಾರು? ಆ ಸಂಚು ಹೇಗಿತ್ತು ಎನ್ನುವುದನ್ನು ಸುವರ್ಣ ನ್ಯೂಸ್ ತನ್ನ ಬಿಗ್ ಎಕ್ಸ್‌ಕ್ಲೂಸಿವ್‌ನಲ್ಲಿ ಬಿಚ್ಚಿಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ.

Video Top Stories