Asianet Suvarna News Asianet Suvarna News

ಭರವಸೆ ಪಟ್ಟಿ ತಂದರೆ ಮಾತ್ರ ಊರಿಗೆ ಪ್ರವೇಶ, ಸಚಿವ ನಾರಾಯಣ ಸ್ವಾಮಿಗೆ ಗೊಲ್ಲರಹಟ್ಟಿ ಜನರ ಡಿಮ್ಯಾಂಡ್!

Jul 10, 2021, 10:19 AM IST

ಬೆಂಗಳೂರು (ಜು. 09) : ಚಿತ್ರದುರ್ಗ ಸಂಸದರಾದ ನಾರಾಯಣ ಸ್ವಾಮಿಯವರಿಗೆ ಕೇಂದ್ರ ಸಚಿವ ಸ್ಥಾನ ಸಿಕ್ಕಿದೆ. ಕೇಂದ್ರ ಸಚಿವರಾದರೂ ಜಾತಿ ತಾರತಮ್ಯದ ಬಿಸಿ ತಟ್ಟದೇ ಇರಲಿಲ್ಲ. ಸಚಿವರಾದ ಬೆನ್ನಲ್ಲೇ ನಾರಾಯಣ ಸ್ವಾಮಿಯವರು ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಗೊಲ್ಲರಹಟ್ಟಿಗೆ ಬಂದ ಸಂದರ್ಭದಲ್ಲಿ ಬಬಿಷ್ಕಾರ ಹಾಕಲಾಗಿತ್ತು. ಬಳಿಕ ಅದ್ದೂರಿಯಾಗಿ ಸ್ವಾಗತಿಸಿ, ತಮ್ಮ ನಡೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು. ಇದೆಲ್ಲಾ ಹಳೇ ಕಥೆ. ಈಗ ಮತ್ತೆ ಹಟ್ಟಿಗೆ ಬರುವುದಾದರೆ, ಭರವಸೆಯ ಪಟ್ಟಿ ತರಲಿ. ಅಂದು ಕೊಟ್ಟ ಭರವಸೆ ಈಡೇರಿಸಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. 

ಬಿಎಸ್‌ವೈ ಪಾಲಿಗೆ ವರವಾದ ಕೇಂದ್ರದ ಹೊಸ ಕ್ಯಾಬಿನೆಟ್: ಮೋದಿ ಟೀಂ ರಹಸ್ಯ!